ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಕನ್ನಡ ಪ್ರೇಮ ತೋರಿದ ನಿವೇದಿತಾ ಗೌಡ – ವಿಡಿಯೋ ವೈರಲ್!


ಯಾವುದೇ ಟೀಕೆ, ಟಿಪ್ಪಣಿ ಅಥವಾ ಕಾಲೆಳೆತಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮದೇ ಆದ ಸ್ಟೈಲ್‌ನಲ್ಲಿ ಮುಂದೆ ಸಾಗುವ ನಟಿ ನಿವೇದಿತಾ ಗೌಡ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಇಂಗ್ಲಿಷ್ ಹಾಗೂ ಇತರ ಭಾಷೆಯ ಹಾಡುಗಳಿಗೆ ಹೆಚ್ಚು ಹೆಜ್ಜೆ ಹಾಕುವ ಅವರು, ಈ ಬಾರಿ ಕನ್ನಡ ಪ್ರೇಮ ತೋರಿಸಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮಧ್ಯದಲ್ಲೇ, ಕಿಚ್ಚ ಸುದೀಪ್ ನಿರ್ದೇಶಿಸಿ ನಟಿಸಿದ್ದ ಕೆಂಪೇಗೌಡ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡ ನಿವೇದಿತಾ, “ನನ್ನ ಇಷ್ಟದ ಹಾಡಿಗೆ ನ್ಯೂಯಾರ್ಕ್‌ನಲ್ಲಿ ಹೆಜ್ಜೆ ಹಾಕುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವೈರಲ್ ಆಗಿದ್ದು, ಕೇವಲ 18 ಗಂಟೆಗಳಲ್ಲಿ 37,000ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅಭಿಮಾನಿಗಳು ಅವರ ಕನ್ನಡ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ಹಲವಾರು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಿವೇದಿತಾ ಕೇವಲ ಈ ಒಂದು ವಿಡಿಯೋ ಮಾತ್ರವಲ್ಲದೆ, ತಮ್ಮ ನ್ಯೂಯಾರ್ಕ್ ಪ್ರವಾಸದ ಹಲವಾರು ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿಯೆಟ್ನಾಂ ಪ್ರವಾಸದಲ್ಲೂ ಸ್ನೇಹಿತೆ ಪ್ರತಿಭಾ ಗೌಡ ಹಾಗೂ ಬಿಗ್ ಬಾಸ್ ಖ್ಯಾತಿಯ ಧನರಾಜ್, ರಜತ್, ಅಕ್ಷಿತಾ ಮತ್ತು ಅಖಿಲಾ ಪ್ರಕಾಶ್ ಜೊತೆಯಲ್ಲಿ ಎಂಜಾಯ್ ಮಾಡಿದ್ದ ನಿವೇದಿತಾ, ಆ ಸಂದರ್ಭದಲ್ಲಿ ಕೂಡ ಹಲವಾರು ವೈರಲ್ ರೀಲ್ಸ್ ಮಾಡಿದ್ದರು.
ಇದೀಗ ಅವರು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆಗೆ ನಟಿಸಿರುವ ಮುದ್ದು ರಾಕ್ಷಸಿ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಸೃಜನ್ ಲೊಕೇಶ್ ಜೊತೆ ನಟಿಸಿರುವ ಜಿಎಸ್‌ಟಿ ಚಿತ್ರವೂ ಬಿಡುಗಡೆಯ ಹಾದಿಯಲ್ಲಿ ಇದೆ. ಹೀಗಾಗಿ, ನ್ಯೂಯಾರ್ಕ್‌ನಲ್ಲಿ ಕನ್ನಡ ಪ್ರೇಮ ತೋರಿಸಿ ಅಭಿಮಾನಿಗಳ ಹೃದಯ ಗೆದ್ದಿರುವ ನಿವೇದಿತಾ, ತಮ್ಮ ಮುಂದಿನ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
