Back to Top

ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿಯ ಹೈಡ್ರಾಮಾ

SSTV Profile Logo SStv September 20, 2024
ಜಾನಿ ಮಾಸ್ಟರ್ ಬಂಧನ
ಜಾನಿ ಮಾಸ್ಟರ್ ಬಂಧನ
ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿಯ ಹೈಡ್ರಾಮಾ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ (Shiek Jani Basha) ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಇದೀಗ ಹೈದ್ರಾಬಾದ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. 21 ವರ್ಷದ ಯುವತಿಯೊಬ್ಬರು ಆಂಧ್ರ ಪ್ರದೇಶದ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಜಾನಿ ಮಾಸ್ಟರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಜಾನಿ ಮಾಸ್ಟರ್ ತಲೆಮರೆಸಿಕೊಂಡಿದ್ದು, ನಂತರ ಅವರನ್ನು ಗೋವಾದಲ್ಲಿ ಬಂಧಿಸಲಾಗಿದೆ. ಜಾನಿ ಮಾಸ್ಟರ್ ಪತ್ನಿ ಆಯೇಷಾ, ಗಂಡನ ಬಂಧನದ ವಿಚಾರವನ್ನು ಕೇಳಲು ಪೊಲೀಸ್ ಠಾಣೆಗೆ ಬಂದು, ಆಕ್ರೋಶ ವ್ಯಕ್ತಪಡಿಸುತ್ತಾ, ಗಂಡನನ್ನು ಭೇಟಿ ಮಾಡುವ ಬೇಡಿಕೆಯನ್ನು ಈಡೇರಿಸಲು ಹೈಡ್ರಾಮಾ ನಡೆಸಿದ್ದಾರೆ. ಜಾನಿ ಮಾಸ್ಟರ್, ಟಾಲಿವುಡ್‌ನಲ್ಲೂ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಖ್ಯಾತ ಕೊರಿಯೋಗ್ರಾಫರ್ ಆಗಿದ್ದಾರೆ. ಆದರೆ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಅವರ ಮೇಲೆ ಭಾರಿ ಚರ್ಚೆಗಳು ನಡೆಯುತ್ತಿದ್ದು, ಈ ಪ್ರಕರಣವು ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.