ಬಿಗ್‌ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ – ಏನದು?


ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಪ್ರೇಕ್ಷಕರ ಮನಸೆಳೆಯಿದ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ, ಈಗ ಹೊಸ ದಾರಿಗೆ ಕಾಲಿಟ್ಟಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹೊಸ ಸಿನಿಮಾವೋ ಅಥವಾ ಪ್ರಾಜೆಕ್ಟ್‌ಅನ್ನೋ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು, "ಸಂಗೀತಾ ಈಗ ಏನು ಮಾಡ್ತಿದ್ದಾರೆ?" ಅನ್ನೋ ಕುತೂಹಲದಲ್ಲಿ ಇದ್ದರು. ಆದರೆ, ಈ ಬಾರಿ ನಟಿ ಸಿನಿಮಾ ಜಗತ್ತಲ್ಲ, ಬಿಸಿನೆಸ್ ಜಗತ್ತಿಗೆ ಮುಖ ಮಾಡಿದ್ದಾರೆ.
ಸಂಗೀತಾ ಶೃಂಗೇರಿ ಕೇವಲ ನಟಿಯಷ್ಟೇ ಅಲ್ಲ, ಆಧ್ಯಾತ್ಮಿಕತೆಯ ಮೇಲೂ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರ ಬಳಿ ಹಲವಾರು ಸ್ಫಟಿಕದ ಹರಳುಗಳಿದ್ದು, ಜೀವನದಲ್ಲಿ ಸಾಧನೆ ಮಾಡಲು ಮತ್ತು ಮನಸ್ಸಿನ ಶಾಂತಿಗಾಗಿ ಅವು ಸಹಕಾರಿಯಾಗುತ್ತವೆ ಎಂಬ ನಂಬಿಕೆ ಅವರದ್ದು. ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು, ಈಗ ಹೊಸ ಕೆಲಸಕ್ಕೆ ಚಾಲನೆ ನೀಡಲು ಅವರು ಸಜ್ಜಾಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ವೇಟ್ ಲಾಸ್ ಮಾಡಿಕೊಂಡಿದ್ದ ಸಂಗೀತಾ, ಇತ್ತೀಚೆಗೆ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುವ ಅವರು, ದೇಹವನ್ನ ಸಂಪೂರ್ಣವಾಗಿ ಹುರಿಗೊಳಿಸಿಕೊಂಡಿದ್ದಾರೆ. ಫಿಟ್ನೆಸ್ ಜೊತೆಗೆ ಸ್ವಯಂ ಶಿಸ್ತನ್ನು ಬೆಳೆಸಿಕೊಂಡಿರುವ ಸಂಗೀತಾ, ಯುವ ಅಭಿಮಾನಿಗಳಿಗೆ ಫಿಟ್ನೆಸ್ ಐಕಾನ್ ಆಗಿ ಪರಿಣಮಿಸಿದ್ದಾರೆ.
ಸದ್ಯ ಹೊಸ ಸ್ಥಳಗಳನ್ನು ಸಂಚರಿಸುತ್ತ, ಹೊಸ ಅನುಭವಗಳನ್ನು ಕಂಡುಕೊಳ್ಳುತ್ತಾ, ಹೆಚ್ಚು ಕಲರ್‌ಫುಲ್ ಮತ್ತು ಪಾಸಿಟಿವ್ ಲುಕ್‌ನಲ್ಲಿ ಹೊಳೆಯುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳು ಒಂದೇ ನಿರೀಕ್ಷೆಯಲ್ಲಿ ಇದ್ದಾರೆ – “ಸಂಗೀತಾ ಮತ್ತೆ ತೆರೆಗೆ ಬರ್ತಾರಾ? ಮತ್ತೆ ಬಣ್ಣ ಹಚ್ಚಿಲಿ ಸಿನಿಮಾ ಜಗತ್ತಿನಲ್ಲಿ ಮಿಂಚ್ತಾರಾ?”
ಅಭಿಮಾನಿಗಳ ಈ ಆಸೆಗೆ ಸಿಂಹಿಣಿ ಯಾವಾಗ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ಕಾಲವೇ ಉತ್ತರಿಸಬೇಕು. ಆದರೆ ಇಷ್ಟು ಮಾತ್ರ ಖಚಿತ, ಸಂಗೀತಾ ಶೃಂಗೇರಿ ತಮ್ಮ ಜೀವನದ ಹೊಸ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಇಡುತ್ತಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
