Back to Top

‘ಜಲಂಧರ’ ಚಿತ್ರದ ಹಾಡುಗಳು ‘ಜಂಕಾರ್ ಮ್ಯೂಸಿಕ್’ ತೆಕ್ಕೆಗೆ ಇದು ಪ್ರಮೋದ್ ಶೆಟ್ಟಿ ಸಿನಿಮಾ

SSTV Profile Logo SStv October 14, 2024
ಜಲಂಧರ ಚಿತ್ರದ ಹಾಡುಗಳು ಜಂಕಾರ್ ಮ್ಯೂಸಿಕ್
ಜಲಂಧರ ಚಿತ್ರದ ಹಾಡುಗಳು ಜಂಕಾರ್ ಮ್ಯೂಸಿಕ್
‘ಜಲಂಧರ’ ಚಿತ್ರದ ಹಾಡುಗಳು ‘ಜಂಕಾರ್ ಮ್ಯೂಸಿಕ್’ ತೆಕ್ಕೆಗೆ ಇದು ಪ್ರಮೋದ್ ಶೆಟ್ಟಿ ಸಿನಿಮಾ ಪ್ರಮೋದ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಜಲಂಧರ’ ಸಿನಿಮಾದ ಹಾಡುಗಳ ಹಕ್ಕುಗಳನ್ನು ಪ್ರಸಿದ್ಧ ಆಡಿಯೋ ಸಂಸ್ಥೆ ‘ಜಂಕಾರ್ ಮ್ಯೂಸಿಕ್’ ಪಡೆದುಕೊಂಡಿದೆ. ವಿಷ್ಣು ವಿ. ಪ್ರಸನ್ನ ನಿರ್ದೇಶನದ ಈ ಚಿತ್ರದಲ್ಲಿ, ಸ್ಟೆಪ್ ಅಫ್ ಲೋಕಿ, ಋಷಿಕಾ ರಾಜ್, ಹಾಗೂ ಆರೋಹಿತಾ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ ಹೀರೋ ಆಗಿ ಮತ್ತೊಮ್ಮೆ ಗಮನ ಸೆಳೆದಿರುವ ಈ ಸಿನಿಮಾದಲ್ಲಿ, ಜಿ. ಜತಿನ್ ದರ್ಶನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಪ್ರಿಯರಲ್ಲಿ ಈಗಾಗಲೇ ಚಿತ್ರದ ಹಾಡುಗಳ ಬಗ್ಗೆ ಕುತೂಹಲ ಹೆಚ್ಚಿದ್ದು, ಜಲಂಧರ ಸ್ಯಾಂಡಲ್‌ವುಡ್‌ನಲ್ಲಿ ಕಾದಿರುವ ಸಿನಿಮಾಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.