Back to Top

"ಇದ್ರೆ ನೆಮ್ಮದಿಯಾಗ್ ಇರ್ಬೇಕ್" – ಸಂಚಾರಿ ವಿಜಯ್ ಚಿತ್ರದ ಹಾಡು ಕದ್ದರಾ ಅಜನೀಶ್ ಲೋಕನಾಥ್?

SSTV Profile Logo SStv August 26, 2025
“ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಟ್ಯೂನ್ ಕಾಪಿ?
“ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಟ್ಯೂನ್ ಕಾಪಿ?

ದರ್ಶನ್ ಅಭಿನಯದ ಬಹು ನಿರೀಕ್ಷಿತ “ಡೆವಿಲ್” ಚಿತ್ರದ ಮೊದಲ ಹಾಡು “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡ್‌ಗೆ ಏರಿದ ಈ ಹಾಡು ಈಗ ಅಭಿಮಾನಿಗಳ ನೆಚ್ಚಿನ ಗೀತೆ. ಆದರೆ ಇದೇ ಹಾಡು ಕೃತಿಚೌರ್ಯ ಆರೋಪದಲ್ಲಿ ಸಿಲುಕಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಲವರು, 2015ರಲ್ಲಿ ಬಿಡುಗಡೆಯಾದ “ನಾನು ಅವನಲ್ಲ ಅವಳು” ಚಿತ್ರದ “ವಾರೆ ವಾರೆ” ಹಾಡು ಮತ್ತು “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಹಾಡುಗಳ ನಡುವೆ ಟ್ಯೂನ್ ಹೋಲಿಕೆ ಮಾಡಿದ್ದಾರೆ. ಸಂಚಾರಿ ವಿಜಯ್ ಅಭಿನಯದ ಆ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದರು. “ವಾರೆ ವಾರೆ” ಹಾಡಿನ ಧಾಟಿ ಮತ್ತು ಈ ಹೊಸ ಹಾಡಿನ ಟ್ಯೂನ್ ಒಂದೇ ತರಹ ಇದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದರಿಂದಾಗಿ, ಡೆವಿಲ್ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತೆ ಕೃತಿಚೌರ್ಯದ ಆರೋಪಕ್ಕೆ ಗುರಿಯಾಗಿದ್ದಾರೆ. ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ನಂತರ ಇದೇ ಮೊದಲ ಬಾರಿಗೆ ಅವರ ಸಂಗೀತದ ಮೇಲೆ ಈ ರೀತಿ ಅನುಮಾನ ವ್ಯಕ್ತವಾಗಿದೆ.

ಆದರೆ ದರ್ಶನ್ ಅಭಿಮಾನಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. “ವಾರೆ ವಾರೆ” ಮತ್ತು “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಹಾಡುಗಳಲ್ಲಿ ಭಿನ್ನತೆಗಳೇ ಹೆಚ್ಚು, ಹೋಲಿಕೆಯೇ ಇಲ್ಲ ಎಂದು ಅವರು ವಾದಿಸುತ್ತಿದ್ದಾರೆ.

ಒಟ್ಟಿನಲ್ಲಿ, ಒಂದು ಕಡೆ ಹಾಡು ಸೂಪರ್ ಹಿಟ್ ಆಗಿ ವೈರಲ್ ಆಗಿರುವಾಗ, ಮತ್ತೊಂದು ಕಡೆ ಇದು ನಕಲು ಎನ್ನುವ ಚರ್ಚೆ ಜೋರಾಗಿದೆ. ನಿಜಕ್ಕೂ ಇದು ಮ್ಯೂಸಿಕ್ ಕಾಪಿ ಕೇಸ್ನಾ ಅಥವಾ ಕೇವಲ ಟ್ಯೂನ್ ಹೋಲಿಕೆನಾ ಎನ್ನುವುದನ್ನು ಕಾಲವೇ ತೀರ್ಮಾನಿಸಬೇಕಿದೆ.