Back to Top

ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ ವಸಿಷ್ಠ ಸಿಂಹ

SSTV Profile Logo SStv October 18, 2024
ಹುಟ್ಟುಹಬ್ಬ ಬ್ರೇಕ್ ಹಾಕಿದ ವಸಿಷ್ಠ ಸಿಂಹ
ಹುಟ್ಟುಹಬ್ಬ ಬ್ರೇಕ್ ಹಾಕಿದ ವಸಿಷ್ಠ ಸಿಂಹ
ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ ವಸಿಷ್ಠ ಸಿಂಹ ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ ಅವರು ಈ ವರ್ಷ ಹುಟ್ಟುಹಬ್ಬದ (ಅ.19) ಆಚರಣೆಗೆ ಬ್ರೇಕ್ ಹಾಕಿದ್ದಾರೆ. ನಾನು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ತಿಲ್ಲ ಎಂದು ಅಭಿಮಾನಿಗಳಿಗೆ ನಟ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಪ್ರೀತಿ ಪಾತ್ರರಿಗೆ ಎಲ್ಲರಿಗೂ ನಮಸ್ಕಾರ, ಅಕ್ಟೋಬರ್ 19ನೇ ತಾರೀಕು ನನ್ನ ಹುಟ್ಟುಹಬ್ಬ. ಈ ಸಲ ಯಾವುದೇ ತರಹ ಆಚರಣೆ ಇರೋದಿಲ್ಲ. ಹಾಗಾಗಿ ನನ್ನ ಪ್ರೀತಿ ಪಾತ್ರರು ನೀವಿರುವ ಜಾಗದಿಂದಲೇ ಹಾರೈಸಿ ಅಂತ ವಿನಂತಿಸಿಕೊಳ್ಳುತ್ತೇನೆ. ಕ್ಷಮಿಸಿ ಈ ವರ್ಷ ಸಿಗೋದಿಲ್ಲ. ಮುಂದಿನ ವರ್ಷ ಖಂಡಿತವಾಗಿಯೂ ಸಿಗೋಣ ಎಂದು ವಸಿಷ್ಠ ಸಿಂಹ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ಅಂದಹಾಗೆ, ಇನ್ನೂ ವಸಿಷ್ಠ ಸಿಂಹ ಅವರು ಕನ್ನಡ ಸೇರಿದಂತೆ ತೆಲುಗಿನ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತೆಲುಗಿನಲ್ಲಿಯೂ ಅವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.