Back to Top

ಬೋಲ್ಡ್ ಬಿಕಿನಿ ಅವತಾರ: ಯುವಕರ ಎದೆ ಬಡಿತ ಹೆಚ್ಚಿಸಿದ ಸೋನು ಗೌಡ

SSTV Profile Logo SStv August 25, 2025
ಹಾರ್ಟ್ ಪೋಸ್‌ನಲ್ಲಿ ಕಂಗೊಳಿಸಿದ ಸೋನು ಗೌಡ
ಹಾರ್ಟ್ ಪೋಸ್‌ನಲ್ಲಿ ಕಂಗೊಳಿಸಿದ ಸೋನು ಗೌಡ

ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಯಾವಾಗಲೂ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲೇ ಇರುತ್ತಾರೆ. ಇತ್ತೀಚೆಗೆ ಅವರು ಶ್ರೀಲಂಕಾದ ಬೀಚ್‌ನಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫುಲ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ.

ಸೋನು ಗೌಡ ಕಲರ್‌ಫುಲ್ ಬಿಕಿನಿ ತೊಟ್ಟು, ಹಾರ್ಟ್ ಶೇಪ್ ಪೋಸ್ ಕೊಟ್ಟ ಫೊಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಂಗಾರದ ಬಣ್ಣದ ಮೈಮಾಟ ಹಾಗೂ ಬಳಕುವ ಸೊಂಟವನ್ನು ನೋಡಿ ಯುವಕರು ಅಕ್ಷರಶಃ "ನಾ ಮುಂದೆ, ತಾ ಮುಂದೆ" ಅನ್ನೋ ತರಹ ಕಾಮೆಂಟ್‌ಗಳಲ್ಲಿ ಅಲೆ ಎಬ್ಬಿಸಿದ್ದಾರೆ.

ಯುವಕರ ಪ್ರತಿಕ್ರಿಯೆ ವಾವ್, ಸೂಪರ್‌ಗೂ ಮೀರಿ, ಬಾಲಿವುಡ್ ಹೀರೋಯಿನ್ ಲುಕ್, ಮೈ ಗರ್ಲ್ ಇಂತಹ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ಕೊಂಡಾಡಿದ್ದಾರೆ. ಇನ್ನೂ ಕೆಲವರು "ಇದಕ್ಕಾಗಿ ಶ್ರೀಲಂಕಾ ಹೋಗ್ಬೇಕಿತ್ತಾ?" ಎಂದು ಕಾಲೆಳೆದಿದ್ದಾರೆ.

ಬೋಲ್ಡ್ ಕ್ವೀನ್ ಸೋನು ಇದು ಮೊದಲ ಬಾರಿಗೆ ಅಲ್ಲ. ಮಾಲ್ಡಿವ್ಸ್ ಪ್ರವಾಸದಲ್ಲಿದ್ದಾಗಲೂ ಸೋನು ಬಿಕಿನಿ ತೊಟ್ಟು ಬೀಚ್‌ನಲ್ಲಿ ರೀಲ್ಸ್ ಮಾಡಿ ಶೇರ್ ಮಾಡಿದ್ದರು. ಆ ವಿಡಿಯೋ ಸಹ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿತ್ತು.

ಸೋನು ಗೌಡನ ಇತ್ತೀಚಿನ ಬೋಲ್ಡ್ ಫೋಟೋಶೂಟ್ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಅವರ ಲುಕ್‌ನ್ನು ಮೆಚ್ಚಿಕೊಂಡರೆ, ಕೆಲವರು “ಸಂಸ್ಕೃತಿ” ಪಾಠ ಮಾಡುತ್ತಿದ್ದಾರೆ. ಆದರೂ ಸೋನು ಸದಾ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳನ್ನು ಎಂಟರ್ಟೈನ್ ಮಾಡುತ್ತಿದ್ದಾರೆ.