ಹೊಂಬಾಳೆ ಫಿಲ್ಮ್ಸ್‌ಗೆ 4 ರಾಷ್ಟ್ರ ಪ್ರಶಸ್ತಿ‘ಕೆಜಿಎಫ್ 3’ ಮತ್ತು ‘ಕಾಂತಾರ 2’ ಬಗ್ಗೆ ನಿರ್ಮಾಪಕರ ಘೋಷಣೆ


ಹೊಂಬಾಳೆ ಫಿಲ್ಮ್ಸ್‌ಗೆ 4 ರಾಷ್ಟ್ರ ಪ್ರಶಸ್ತಿ‘ಕೆಜಿಎಫ್ 3’ ಮತ್ತು ‘ಕಾಂತಾರ 2’ ಬಗ್ಗೆ ನಿರ್ಮಾಪಕರ ಘೋಷಣೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ "ಕೆಜಿಎಫ್ 2" ಮತ್ತು "ಕಾಂತಾರ" ಸಿನಿಮಾಗಳು 4 ಪ್ರಶಸ್ತಿಗಳನ್ನು ಗೆದ್ದಿವೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರು ದೆಹಲಿಯಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಿ, ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. "ಕೆಜಿಎಫ್ 2" ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಮತ್ತು ಸಾಹಸ ನಿರ್ದೇಶನ ವಿಭಾಗದಲ್ಲಿ ಗೌರವ ಪಡೆಯಿತು, "ಕಾಂತಾರ" ಅತ್ಯುತ್ತಮ ಮನರಂಜನಾ ಸಿನಿಮಾ ಆಗಿ ಗುರುತಿಸಿಕೊಂಡಿದೆ. ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿಯೂ ದೊರಕಿದೆ.
ವಿಜಯ್ ಕಿರಗಂದೂರು "ಕೆಜಿಎಫ್ 3" ಬಗ್ಗೆ ಮಾತನಾಡುತ್ತಾ, 4-5 ತಿಂಗಳಲ್ಲಿ ಚಿತ್ರದ ಅಪ್ಡೇಟ್ ನೀಡಲಾಗುವುದು ಎಂದಿದ್ದಾರೆ. "ಕಾಂತಾರ 2" ಶೂಟಿಂಗ್ ಉತ್ತಮವಾಗಿ ಸಾಗುತ್ತಿದ್ದು, 2025 ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
