Back to Top

ನನಗೆ ನಿಮ್ಮ ಅವಾರ್ಡ್ ಬೇಕಿಲ್ಲ ಪ್ರತಿಷ್ಠಿತ ಪ್ರಶಸ್ತಿ ಬಗ್ಗೆ ಹೇಮಂತ್ ರಾವ್ ಅಸಮಾಧಾನ

SSTV Profile Logo SStv September 30, 2024
ಹೇಮಂತ್ ರಾವ್ ಅಸಮಾಧಾನ
ಹೇಮಂತ್ ರಾವ್ ಅಸಮಾಧಾನ
ನನಗೆ ನಿಮ್ಮ ಅವಾರ್ಡ್ ಬೇಕಿಲ್ಲ ಪ್ರತಿಷ್ಠಿತ ಪ್ರಶಸ್ತಿ ಬಗ್ಗೆ ಹೇಮಂತ್ ರಾವ್ ಅಸಮಾಧಾನ ‘ಸಪ್ತ ಸಾಗರದಾಚೆ ಎಲ್ಲೋ’ ಸೇರಿದಂತೆ ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಹೇಮಂತ್ ರಾವ್ ಅವರು ಐಫಾ 2024 ಅವಾರ್ಡ್‌ ಫಂಕ್ಷನ್ ಕುರಿತು ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಹೇಮಂತ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಐಫಾ ಅವಾರ್ಡ್ಸ್‌ನಲ್ಲಿ ನಾಮಿನೇಟ್ ಮಾಡಲಾಗಿದ್ದರೂ, ಅವಾರ್ಡ್ ಸಿಗಲಿಲ್ಲ. ಅವಾರ್ಡ್ ಸಿಗದ ಬಗ್ಗೆ ಅವರಿಗೆ ಬೇಸರ ಇಲ್ಲ, ಆದರೆ ಫಲಿತಾಂಶ ತಿಳಿಯಲು ಮಂಜಾನೆ 3 ಗಂಟೆವರೆಗೆ ಕಾಯಬೇಕಾದ ಅನುಭವಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ನಿಮ್ಮ ಪ್ರಶಸ್ತಿ ಬೇಡ. ನಾನು ನನ್ನ ಸಿನಿಮಾಗಳ ಮೂಲಕ ಸ್ವತಃ ಪ್ರೂವ್ ಮಾಡಿಕೊಂಡಿದ್ದೇನೆ. ನಿಮ್ಮ ವೇದಿಕೆಯೇ ಮುಕ್ತಾಯ ಮಾಡಲಿ," ಎಂದು ಹೇಮಂತ್‌ ರಾವ್‌ ತಮ್ಮ ಸಿಟ್ಟನ್ನು ಹಂಚಿಕೊಂಡಿದ್ದಾರೆ.