ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಹೈದರಾಬಾದ್‌ನ ಯೂಟ್ಯೂಬ್ ಸ್ಟಾರ್ ಹರ್ಷ ಸಾಯಿ ವಿರುದ್ಧ ಒಬ್ಬ ಯುವತಿ ಅ*ಚಾರದ ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಮೂಲದ ನಟಿಯಾಗಿರುವ ಯುವತಿ, ಹರ್ಷ ಸಾಯಿ ಮದುವೆ ಆಗುತ್ತೇನೆಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡು, ನಗ್ನ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಯುವತಿಯ ದೂರು ನರಸಿಂಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹರ್ಷ ಸಾಯಿ ಬಡವರಿಗೆ ನೆರವಳಿಸುವ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹೆಸರು ಮಾಡಿದ್ದವರು, ಆದರೆ ಇದೀಗ ಅವರ ವಿರುದ್ಧ ಐನಾತಿ ಕೇಸೊಂದು ಕೇಳಿ ಬಂದಿದ್ದು, ಆತಂಕ ಮೂಡಿಸಿದೆ.