ನಿರೂಪಕಿ ಅನುಶ್ರೀ ಮದುವೆ: ಹಳದಿ ಶಾಸ್ತ್ರದ ಸಂಭ್ರಮ ಆರಂಭ


ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ದೀರ್ಘಕಾಲದ ನಿರೀಕ್ಷೆಗೆ ತೆರೆ ಬಿದ್ದಿದ್ದು, ಅವರು ತಮ್ಮ ಆಪ್ತರಾದ ರೋಷನ್ ಜೊತೆ ಹಸೆಮಣೆ ಏರುತ್ತಿದ್ದಾರೆ. ಮದುವೆ ಶಾಸ್ತ್ರಗಳು ಈಗಾಗಲೇ ಆರಂಭವಾಗಿದ್ದು, ಮೊದಲ ಹಂತದ ಸಂಭ್ರಮವಾದ ಹಳದಿ ಶಾಸ್ತ್ರ ಅದ್ದೂರಿಯಾಗಿ ನೆರವೇರಿತು. ಕುಟುಂಬದವರು, ಆಪ್ತ ಬಂಧುಗಳು ಹಾಗೂ ಸ್ನೇಹಿತರು ಈ ಹಬ್ಬದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಅನುಶ್ರೀ ಮತ್ತು ರೋಷನ್ ಇಬ್ಬರೂ ಸಂಪ್ರದಾಯಬದ್ಧವಾಗಿ ಭಾಗವಹಿಸಿದರು. ಹಳದಿ ಶಾಸ್ತ್ರದ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅನುಶ್ರೀ ಹಾಗೂ ರೋಷನ್ ಅವರ ಮದುವೆ ಆಗಸ್ಟ್ 28, ಗುರುವಾರ, ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ವಿಶೇಷ ಕ್ಷಣಕ್ಕೆ ಮನರಂಜನಾ ಕ್ಷೇತ್ರದ ಅನೇಕ ಗಣ್ಯರು ಹಾಗೂ ಆಪ್ತರು ಹಾಜರಾಗಲಿದ್ದಾರೆ ಎನ್ನಲಾಗಿದೆ. ಅನುಶ್ರೀ ಅವರು ಕೇವಲ ನಿರೂಪಕಿ ಮಾತ್ರವಲ್ಲ, ನಟಿಯಾಗಿಯೂ ತಮ್ಮದೇ ಆದ ಗುರುತು ಗಳಿಸಿದ್ದಾರೆ. ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ತಮ್ಮ ನೈಸರ್ಗಿಕ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ಅಪಾರವಾಗಿದ್ದು, ಅವರ ಮದುವೆ ಸಂಭ್ರಮಕ್ಕೂ ಅದೇ ರೀತಿ ಅಭಿಮಾನಿಗಳ ಉತ್ಸಾಹ ವ್ಯಕ್ತವಾಗುತ್ತಿದೆ.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅನುಶ್ರೀ ಮತ್ತು ರೋಷನ್ ಜೋಡಿ ಹಳದಿ ಶಾಸ್ತ್ರದಲ್ಲಿ ಕಂಗೊಳಿಸುತ್ತಿರುವುದನ್ನು ನೋಡಿದ ಅಭಿಮಾನಿಗಳು ಹಾಗೂ ಸ್ನೇಹಿತರು, “ದಾಂಪತ್ಯ ಜೀವನ ಸುಖಸಂಪನ್ನವಾಗಿರಲಿ” ಎಂದು ಹಾರೈಸುತ್ತಿದ್ದಾರೆ. ಹೀಗಾಗಿ, ಹಲವು ವರ್ಷಗಳಿಂದ “ಅನುಶ್ರೀ ಮದುವೆ ಯಾವಾಗ?” ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಇದೀಗ ಅವರ ವೈವಾಹಿಕ ಜೀವನಕ್ಕೆ ಕನ್ನಡಿಗರು ಹಾರೈಸುತ್ತಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
