Back to Top

ಗೋಪಿಲೋಲ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್​ ಗಣ್ಯರು ಅ.4ಕ್ಕೆ ಬಿಡುಗಡೆ

SSTV Profile Logo SStv September 25, 2024
ಗೋಪಿಲೋಲ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್
ಗೋಪಿಲೋಲ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್
ಗೋಪಿಲೋಲ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್​ ಗಣ್ಯರು ಅ.4ಕ್ಕೆ ಬಿಡುಗಡೆ ‘ಗೋಪಿಲೋಲ’ ಸಿನಿಮಾ ಅ.4ರಂದು ಬಿಡುಗಡೆ ಆಗಲಿದೆ. ಮಂಜುನಾಥ್‌ ಅರಸ್‌ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ನಿರ್ದೇಶನವನ್ನು ಆರ್. ರವೀಂದ್ರ ಮಾಡಿದ್ದಾರೆ. ನೈಸರ್ಗಿಕ ಕೃಷಿಯ ಮಹತ್ವವನ್ನು ಈ ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ದೊಡ್ಡಣ್ಣ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಸ್ಯಾಂಡಲ್​ವುಡ್​ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ. ಎಸ್​.ಆರ್. ಸನತ್ ಕುಮಾರ್ ನಿರ್ಮಿತ ಈ ಸಿನಿಮಾದಲ್ಲಿ 6 ಹಾಡುಗಳಿದ್ದು, ಲವ್ ಸ್ಟೋರಿ ಜೊತೆಗೆ ಕೃಷಿಯ ಕುರಿತಾದ ಸಂದೇಶವನ್ನು ನೀಡುತ್ತದೆ.