Back to Top

ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ

SSTV Profile Logo SStv October 3, 2024
ಗೊಂಬೆಯಂತೆ ಮಿಂಚಿದ ಶ್ರೀಲೀಲಾ
ಗೊಂಬೆಯಂತೆ ಮಿಂಚಿದ ಶ್ರೀಲೀಲಾ
ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ ಕನ್ನಡದ ಬೆಡಗಿ ಶ್ರೀಲೀಲಾ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ದಂತದ ಗೊಂಬೆಯಂತೆ ನಟಿ ಮಿಂಚಿದ್ದಾರೆ. ಶ್ರೀಲೀಲಾರ ನಯಾ ಲುಕ್ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಶ್ರೀಲೀಲಾ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆಕನ್ನಡದ ‘ಕಿಸ್’ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ್ದ ಶ್ರೀಲೀಲಾ ಈಗ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ತೆಲುಗು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದ್ದರೂ ಕೂಡ ನಟಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಕಿಸ್, ಭರಾಟೆ, ಬೈಟು ಲವ್ ಚಿತ್ರದಲ್ಲಿ ನಟಿಸಿದ ನಂತರ ಅವರು ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ಇಂದು ಸ್ಟಾರ್ ನಟರಿಗೆ ಇವರೇ ನಾಯಕಿಯಾಗಬೇಕು ಎಂಬುವಷ್ಟರ ಮಟ್ಟಿಗೆ ಶ್ರೀಲೀಲಾ ಬೆಳೆದಿದ್ದಾರೆ.ಸದ್ಯ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳಿವೆ. ಬಾಲಿವುಡ್‌ನಲ್ಲಿ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.