Back to Top

‘ಬಿಗ್ ಬಾಸ್’ಗೆ ಅವಕಾಶ ಸಿಕ್ಕರೆ 100% ಹೋಗುತ್ತೇನೆ

SSTV Profile Logo SStv September 20, 2024
ಗಿಚ್ಚಿ ಗಿಲಿಗಿಲಿ 3 ವಿನ್ನರ್ ಕಾರ್ತಿಕ್
ಗಿಚ್ಚಿ ಗಿಲಿಗಿಲಿ 3 ವಿನ್ನರ್ ಕಾರ್ತಿಕ್
‘ಬಿಗ್ ಬಾಸ್’ಗೆ ಅವಕಾಶ ಸಿಕ್ಕರೆ 100% ಹೋಗುತ್ತೇನೆ: ಗಿಚ್ಚಿ ಗಿಲಿಗಿಲಿ 3 ವಿನ್ನರ್ ಕಾರ್ತಿಕ್ ಗಿಚ್ಚಿ ಗಿಲಿಗಿಲಿ 3 ವಿನ್ನರ್ ಹುಲಿ ಕಾರ್ತಿಕ್ ಬಿಗ್ ಬಾಸ್ ಕನ್ನಡ 11 ರಲ್ಲಿ ಪಾಲ್ಗೊಳ್ಳುವ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ ಅವರು, “ಅವಕಾಶ ಸಿಕ್ಕರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ. ಆದರೆ, ಈವರೆಗೆ ವಾಹಿನಿಯ ಕಡೆಯಿಂದ ಯಾವುದೇ ಆಫರ್ ಬಂದಿಲ್ಲ" ಎಂದಿದ್ದಾರೆ. ತಮಾಷೆಯಾಗಿ, "ಬಿಗ್ ಬಾಸ್‌ಗೆ ನಾನು ಹೋಗ್ತೀನಿ ಅಂದ್ರೆ, ನನ್ನ ಹೆಸರು ಓಡಾಡುತ್ತಾ ಇದೆ, ನಾನು ಮಾತ್ರ ಓಡಾಡುತ್ತಿಲ್ಲ" ಎಂದು ಹೇಳಿದರು. ಇನ್ನು ಬಿಗ್ ಬಾಸ್ ಅಥವಾ ಇತರ ಶೋಗಳು ಏನೇ ಆದರೂ, ಮನರಂಜನೆ ನೀಡುವುದು ನನ್ನ ಕರ್ತವ್ಯ ಎಂದು ಹೇಳಿರುವ ಕಾರ್ತಿಕ್, ದೊಡ್ಮನೆಗೆ ಹೋಗಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.