Back to Top

ರೊಮ್ಯಾಂಟಿಕ್ ಹನಿಮೂನ್ ಫೋಟೋಸ್ ಪೋಸ್ಟ್ ಮಾಡಿ ಗಂಡ ತರುಣ್​ಗೆ ವಿಶ್ ಮಾಡಿದ ಸೋನಲ್

SSTV Profile Logo SStv October 9, 2024
ಗಂಡ ತರುಣ್​ಗೆ ವಿಶ್ ಮಾಡಿದ ಸೋನಲ್
ಗಂಡ ತರುಣ್​ಗೆ ವಿಶ್ ಮಾಡಿದ ಸೋನಲ್
ರೊಮ್ಯಾಂಟಿಕ್ ಹನಿಮೂನ್ ಫೋಟೋಸ್ ಪೋಸ್ಟ್ ಮಾಡಿ ಗಂಡ ತರುಣ್​ಗೆ ವಿಶ್ ಮಾಡಿದ ಸೋನಲ್ ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ತರುಣ್ ಸುಧೀರ್‌ ಅವರ ಜನ್ಮದಿನವನ್ನು ಪತ್ನಿ, ನಟಿ ಸೋನಲ್ ಮೊಂಥೇರೋ ರೊಮ್ಯಾಂಟಿಕ್ ಹನಿಮೂನ್ ಫೋಟೋಸ್‌ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ. ಸೋನಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹನಿಮೂನ್ ಫೋಟೋಗಳನ್ನು ಹಂಚಿಕೊಂಡು, "ಜಗತ್ತಿನ ಅತಿ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸ್ಸುಳ್ಳ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಹಾರೈಸಿದ್ದಾರೆ. ಹೃದಯದ ಆEmojiಗಳೊಂದಿಗೆ "ಐ ಲವ್ ಯೂ" ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಸೋನಲ್‌ಗೆ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದು, "ಥ್ಯಾಂಕ್ಸ್ ಲವ್" ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಹಂಚಿಕೊಂಡಿರುವ ಫೋಟೋಗಳಲ್ಲಿ ತರುಣ್‌ ಅವರು ವೈಟ್ ಡ್ರೆಸ್ ಧರಿಸಿದ್ದು, ಗಾಗಲ್ಸ್‌ ಸಹ ಹಾಕಿದ್ದಾರೆ. ಸೋನಲ್‌ ಮೊಂಥೆರೋ ಅರೆಬಿಯನ್‌ ಶೈಲಿಯ ಡ್ರೆಸ್‌ ಧರಿಸಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಈ ಸ್ಯಾಂಡಲ್‌ವುಡ್‌ ದಂಪತಿ ಮರಳುಭೂಮಿಯಲ್ಲಿ ಸೂರ್ಯಾಸ್ತದ ಸೌಂದರ್ಯವನ್ನು ಆನಂದಿಸುತ್ತಿರುವ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ.