Back to Top

ಶರ್ಮಿಳಾ ಮಾಂಡ್ರೆಗೆ ಈ ವರ್ಷದ ಗಣೇಶನ ಹಬ್ಬ ಡಬಲ್ ಸ್ಪೆಷಲ್! ಯಾಕ್ ಗೊತ್ತಾ?

SSTV Profile Logo SStv August 28, 2025
ಎರಡು ಭರ್ಜರಿ ಸಿನಿಮಾಗಳೊಂದಿಗೆ ಗಣೇಶ ಹಬ್ಬ ಸಡಗರದಲ್ಲಿ ಶರ್ಮಿಳಾ ಮಾಂಡ್ರೆ!
ಎರಡು ಭರ್ಜರಿ ಸಿನಿಮಾಗಳೊಂದಿಗೆ ಗಣೇಶ ಹಬ್ಬ ಸಡಗರದಲ್ಲಿ ಶರ್ಮಿಳಾ ಮಾಂಡ್ರೆ!

ಕನ್ನಡದ ಗ್ಲಾಮರಸ್ ನಟಿ ಶರ್ಮಿಳಾ ಮಾಂಡ್ರೆ ಅವರಿಗೆ ಈ ಬಾರಿಯ ಗಣೇಶ ಚತುರ್ಥಿ ವಿಶೇಷವಾಗಿದೆ. ಕಾರಣವೇನೆಂದರೆ, ಅವರು ಸದ್ದು ಮಾಡುತ್ತಿರುವ ಎರಡು ದೊಡ್ಡ ಸಿನಿಮಾಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಒಂದೆಡೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ನಟಿಸಿರುವ “ದಿ ಡೆವಿಲ್” ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗಲು ಸಿದ್ಧವಾಗಿದೆ. ಇದರಿಂದಲೇ ಫ್ಯಾನ್ಸ್ ನಡುವೆ ಶರ್ಮಿಳಾಳಿಗೆ ಭಾರಿ ಕ್ರೇಜ್ ಮೂಡಿದೆ. ಮತ್ತೊಂದೆಡೆ ಅವರು ಶಿವರಾಜ್‌ಕುಮಾರ್ ಜತೆ ನಟಿಸುತ್ತಿರುವ “ಡ್ಯಾಡ್” ಸಿನಿಮಾದ ಶೂಟಿಂಗ್ ಕೂಡ ಪ್ರಾರಂಭವಾಗಿದೆ.

“ಮಾಸ್ ಲೀಡರ್ ಬಳಿಕ ಬಹಳ ವರ್ಷಗಳ ನಂತರ ಶಿವಣ್ಣಾ ಜೊತೆಗೆ ಮತ್ತೆ ನಟಿಸುತ್ತಿದ್ದೇನೆ. ಡ್ಯಾಡ್ ಕಥೆ ಕೇಳುವಾಗಲೇ ನನಗೆ ಭಾವುಕತೆ ಮೂಡಿತು. ಸಾಮಾನ್ಯವಾಗಿ ನಾನು ಕಥೆ ಕೇಳಿದ ತಕ್ಷಣ ಒಪ್ಪುವುದಿಲ್ಲ. ಆದರೆ ಈ ಬಾರಿ ತಡ ಮಾಡದೇ ಒಪ್ಪಿಕೊಂಡೆ. ಶಿವಣ್ಣಾ ಜೊತೆಗಿನ ಅವಕಾಶ ಯಾರೂ ಬಿಟ್ಟು ಕೊಡೋದಿಲ್ಲ.”

“ಈಗಿನದು ರೀಲ್ಸ್ ನೋಡುವ ಜನರೇಷನ್. ಇಂಥಾ ಜನರನ್ನು ಮೂರು ಗಂಟೆ ಸಿನಿಮಾ ನೋಡಿಸುತ್ತಾ ಕುಳ್ಳಿರಿಸುವುದು ನಿಜವಾದ ಚಾಲೆಂಜ್. ಆದರೆ ‘ಡ್ಯಾಡ್’ ಕಥೆ ನನಗೆ ಕೇಳುವಾಗಲೇ ಸೆಳೆಯಿತು. ನಿರ್ದೇಶಕರ ಶೈಲಿ ಆಕರ್ಷಿಸಿತು. ಅದಕ್ಕಾಗಿ ಅವರ ಕೆಲಸಗಳ ಬಗ್ಗೆ ಇನ್ನಷ್ಟು ಬಲ್ಲೆ.”

‘ದಿ ಡೆವಿಲ್’ ಮೂಲಕ ಮಾಸ್ ಆಕ್ಷನ್‌ಗೆ ಸೋಜಿಗ ಕೊಟ್ಟಿರುವ ಶರ್ಮಿಳಾ, ‘ಡ್ಯಾಡ್’ ಸಿನಿಮಾದಲ್ಲಿ ಎಮೋಶನಲ್ ಹಾಗೂ ಕಥಾ ಹಂದರ ಆಧಾರಿತ ಪಾತ್ರದಲ್ಲಿ ಕಾಣಿಸಲಿದ್ದಾರೆ. ಹೀಗಾಗಿ ಈ ವರ್ಷದ ಅವರ ಗಣೇಶ ಹಬ್ಬದ ಸಂಭ್ರಮ ಡಬಲ್ ಖುಷಿ ತಂದಿದೆ.