Back to Top

ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ

SSTV Profile Logo SStv October 9, 2024
ಎಮೋಷನಲ್ ಆದ ಬಾದ್​ಶಾ
ಎಮೋಷನಲ್ ಆದ ಬಾದ್​ಶಾ
ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ ಮೈಸೂರಿನ ‘ಯುವ ದಸರಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 8ರಂದು ಬಾಲಿವುಡ್‌ ರ‍್ಯಾಪರ್‌ ಮತ್ತು ಸಿಂಗರ್‌ ಬಾದ್‌ಶಾ ಅವರು ಭಾಗವಹಿಸಿ, ಪ್ರೇಕ್ಷಕರನ್ನು ಕನ್ನಡ ಮಾತುಗಳಿಂದ ಆಕರ್ಷಿಸಿದರು. ಕನ್ನಡದಲ್ಲಿ ಮಾತನಾಡಿದ ಬಾದ್‌ಶಾ, "ನಾನು ಯಾವುದೇ ಸ್ಟಾರ್‌ ಅಲ್ಲ, ಸೂಪರ್‌ಸ್ಟಾರ್‌ ಕೂಡ ಅಲ್ಲ. ನಾನು ಬರಹಗಾರ, ನಿಮ್ಮಲ್ಲಿ ಒಬ್ಬ," ಎಂದು ಹೇಳಿ ಅಭಿಮಾನಿಗಳ ಮನ ಗೆದ್ದರು. ಈ ವೇಳೆ, ಪುನೀತ್‌ ರಾಜ್‌ಕುಮಾರ್‌ ನಟನೆಯ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡು ಬಂದಾಗ, ಬಾದ್‌ಶಾ ಅವರು ಸಖತ್ ಎಮೋಷನಲ್‌ ಆಗಿ, ಹಾಡಲು ಸಾಧ್ಯವಾಗದೆ, ಕೈ ಮುಗಿದು ಕುಳಿತುಕೊಂಡರು. ಈ ದೃಶ್ಯದಿಂದ ಅವರ ಪುನೀತ್‌ ರಾಜ್‌ಕುಮಾರ್‌ ಮೇಲಿನ ಗೌರವ ಸ್ಪಷ್ಟವಾಯಿತು. ಬಾದ್‌ಶಾ ಅವರ ನಿಜವಾದ ಹೆಸರು ಆದಿತ್ಯ ಪ್ರತೀಕ್‌ ಸಿಂಗ್‌. ದೆಹಲಿಯಲ್ಲಿ ಜನಿಸಿದ ಬಾದ್‌ಶಾ ಅವರು ಬಾಲಿವುಡ್‌ನಲ್ಲಿ ರ‍್ಯಾಪರ್‌, ಗಾಯಕ ಮತ್ತು ಗೀತ ಸಾಹಿತಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.