Back to Top

ಜೈಲು ಭೇಟಿಯನ್ನು ದಿಢೀರ್ ರದ್ದು ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

SSTV Profile Logo SStv October 14, 2024
ದಿಢೀರ್ ರದ್ದು ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ದಿಢೀರ್ ರದ್ದು ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಜೈಲು ಭೇಟಿಯನ್ನು ದಿಢೀರ್ ರದ್ದು ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ A2 ದರ್ಶನ್, ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಇಂದು, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಅವರನ್ನು ಭೇಟಿ ಮಾಡಲು ಬಳ್ಳಾರಿಗೆ ಬರಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಭೇಟಿ ರದ್ದು ಮಾಡಲಾಗಿದೆ. ಬೆಂಗಳೂರಿನ 57ನೇ CCH ಕೋರ್ಟ್‌ನಲ್ಲಿ ದರ್ಶನ್‌ ಬೇಲ್‌ ಅರ್ಜಿ ವಿಚಾರಣೆ ತಡವಾಗಿದ್ದ ಕಾರಣ, ವಿಜಯಲಕ್ಷ್ಮಿ ತಮ್ಮ ಜೈಲು ಭೇಟಿ ನಿರ್ಧಾರವನ್ನು ಬದಲಿಸಿದ್ದಾರೆ. ದರ್ಶನ್‌ರನ್ನು ನಟ ಧನ್ವೀರ್ ಗೌಡ, ಸುಶಾಂತ್ ಮತ್ತು ಅಳಿಯ ಹೇಮಂತ್ ಮಾತ್ರ ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಲು ಹೋಗಿದ್ದಾರೆ.