‘ಕೆಡಿ’ ಬಳಿಕ ಸೂರಿ-ಧ್ರುವ ಸಿನಿಮಾ? – ಅಭಿಮಾನಿಗಳಲ್ಲಿ ಕುತೂಹಲದ ಚರ್ಚೆ!


ಕನ್ನಡ ಚಿತ್ರರಂಗದಲ್ಲಿ ಮಾಸ್ ಆಕ್ಷನ್ ಮತ್ತು ರಿಯಲಿಸ್ಟಿಕ್ ರಾ ಸಿನಿಮಾಗಳ ಸಂಯೋಜನೆ ನೋಡುವ ಆಸೆ ಅಭಿಮಾನಿಗಳದ್ದು. ಆ ಆಸೆಯನ್ನು ತಣಿಸುವ ಧ್ರುವ ಸರ್ಜಾ – ದುನಿಯಾ ಸೂರಿ ಜೋಡಿ ಸಿನಿಮಾ ಬಗ್ಗೆ ಈಗ ಗಾಂಧಿನಗರದಲ್ಲಿ ಗುಸುಗುಸು ಶುರುವಾಗಿದೆ.
ಧ್ರುವ ಸರ್ಜಾ ‘ಭರ್ಜರಿ’ಯಿಂದ ಬಂದ ಸಕ್ಸೆಸ್ ನಂತರ ನಿರೀಕ್ಷಿತ ಮಟ್ಟದ ಹಿಟ್ ಕೊಡಲು ಹೋರಾಟ ನಡೆಸುತ್ತಿದ್ದಾರೆ. ‘ಪೋಗರು’ ಹಾಗೂ ಇತರ ಸಿನಿಮಾಗಳು ಅಷ್ಟು ಬಲವಾಗಿ ಗೆಲ್ಲದಿದ್ದರೂ, ಅವರ ಅಭಿಮಾನಿ ಬಳಗ ಇನ್ನೂ ದೊಡ್ಡದು. ಪ್ರಸ್ತುತ ಅವರು ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ನಂತರ ರಾಜ್ ಗುರು ಅವರ ನಿರ್ದೇಶನದಲ್ಲೂ ಸಿನಿಮಾ ಮಾಡಲಿದ್ದಾರೆ.
ಇದೇ ಸಮಯದಲ್ಲಿ, ದುನಿಯಾ ಸೂರಿಗೂ ದೊಡ್ಡ ಹಿಟ್ ಅಗತ್ಯ. ‘ಟಗರು’ ಬಳಿಕ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆದ್ದಿಲ್ಲ. ‘ಬ್ಯಾಡ್ ಮ್ಯಾನರ್ಸ್’ ಫ್ಲಾಪ್ ನಂತರ ಈಗ ಅವರು ಯುವ ರಾಜ್‌ಕುಮಾರ್ ಜೊತೆ ಸಿನಿಮಾ ಆರಂಭಿಸಿದ್ದಾರೆ. ಇದರಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಟಿಸುತ್ತಿದ್ದಾರೆ. ಇದು ಅವರ ಕನಸಿನ ಪ್ರಾಜೆಕ್ಟ್ ‘ಕಾಗೆ ಬಂಗಾರ’-3 ಆಗಿರಬಹುದೆಂದು ಊಹಾಪೋಹ ನಡೆಯುತ್ತಿದೆ.
ಒಂದೆಡೆ ಮಾಸ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಮತ್ತೊಂದೆಡೆ ರಿಯಲಿಸ್ಟಿಕ್ ಡೈರೆಕ್ಟರ್ ದುನಿಯಾ ಸೂರಿ. ಇವರಿಬ್ಬರೂ ಕೈ ಜೋಡಿಸಿದರೆ ಪರದೆ ಮೇಲೆ ಮಾಸ್ ಪ್ರೇಕ್ಷಕರಿಗೆ ನಿಜಕ್ಕೂ ಹಬ್ಬವೇ ಸರಿ. ಆದರೆ ಕಥೆ, ಬ್ಯಾನರ್, ಪ್ರೊಡಕ್ಷನ್ ಎಲ್ಲವೂ ಇನ್ನೂ ಫೈನಲ್ ಆಗಿಲ್ಲ. ಅಭಿಮಾನಿಗಳು "ಸೂರಿ-ಧ್ರುವ ಜೋಡಿ ಸಿನಿಮಾ ಯಾವಾಗ?" ಎಂದು ಕಾಯುತ್ತಿದ್ದಾರೆ. ಆದರೆ ಇಬ್ಬರಿಗೂ ಬೇರೆ ಬೇರೆ ಪ್ರಾಜೆಕ್ಟ್‌ಗಳು ಇರುವುದರಿಂದ ಈ ಸಿನಿಮಾ ಶುರುವಾಗುವುದು ಇನ್ನೂ ಒಂದು-ಎರಡು ವರ್ಷಗಳ ನಂತರವೇ ಅನಿಸುತ್ತದೆ.
ಹೀಗಾಗಿ, ಸೂರಿ-ಧ್ರುವ ಜೋಡಿ ಸಿನಿಮಾ ‘ಯಾವ ಕಾಲಕ್ಕೋ?’ ಎಂಬ ಅಭಿಮಾನಿಗಳ ಬೇಸರದ ಕಾಮೆಂಟ್ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
