‘ಡೆವಿಲ್’ ಸಾಂಗ್ ಕ್ರೇಜ್: 22 ಗಂಟೆಗಳಲ್ಲಿ 10 ಮಿಲಿಯನ್ ವ್ಯೂಸ್, ರೀಲ್ಸ್ ಮಳೆ!


‘ಡೆವಿಲ್’ ಸಿನಿಮಾದ ಇದ್ರೇ ನೆಮ್ದಿಯಾಗ್ ಇರ್ಬೇಕ್ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ. ಕೇವಲ 22 ಗಂಟೆಗಳಲ್ಲಿ ಈ ಹಾಡು 10 ಮಿಲಿಯನ್‌ಗೂ ಹೆಚ್ಚು ವ್ಯೂಸ್ ಪಡೆದು, ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡಿದೆ.
ರಿಲೀಸ್ ದಿನವೇ ರೀಲ್ಸ್ ಜಾತ್ರೆ, ಹಾಡು ಬಿಡುಗಡೆಯಾದ ದಿನವೇ ಸಂಜೆ ಹೊತ್ತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಳೆ ಸುರಿಯಿತು. ಚಿಕ್ಕಮಕ್ಕಳು, ಯುವಕರು, ನಟರು-ನಟಿಯರು, ನೃತ್ಯಗಾರರು ಎಲ್ಲರೂ ತಮ್ಮ ತಮ್ಮ ಸ್ಟೈಲ್‌ನಲ್ಲಿ ಈ ಹಾಡಿಗೆ ರೀಲ್ಸ್ ಮಾಡಿ ಹಂಚಿಕೊಂಡರು. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಗಿಣಿರಾಮ ಫೇಮ್ ರಿತ್ವಿಕ್ ಮಠದ್, ಕೋರಿಯೋಗ್ರಾಫರ್ ಮುರಳಿ ಮಾಸ್ಟರ್, ನಟಿ ಮತ್ತು ಬಾಡಿಬಿಲ್ಡರ್ ಚಿತ್ರಲ್ ರಂಗಸ್ವಾಮಿ ಎಲ್ಲರೂ ಈ ಹಾಡಿನ ಕ್ರೇಜ್‌ಗೆ ಕೈಜೋಡಿಸಿದ್ದಾರೆ.
ಒಂದು ಪುಟ್ಟ ಮಗು ಟಿವಿಯಲ್ಲಿ ಪ್ಲೇ ಮಾಡಿರೋ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಈ ಹಾಡು ಮಕ್ಕಳಿಗೂ ಮನಸೋತಿದೆ ಎನ್ನುವುದು ಸ್ಪಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲೇ ಅಲ್ಲದೆ, ಸಿನಿಮಾದ ಪ್ರಚಾರಕ್ಕೂ ಈ ಹಾಡು ದೊಡ್ಡ ಪುಷ್ ನೀಡುತ್ತಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
