"ಸಾರಥಿ" ಅನುಭವ ಹಂಚಿಕೊಂಡ ಸತ್ಯ ಪ್ರಕಾಶ್ – "ಡೆವಿಲ್" ಮೇಕರ್‌ಗೆ ಧೈರ್ಯ ತುಂಬಿದ ಪ್ರೊಡ್ಯೂಸರ್


ದರ್ಶನ್ ಜೈಲಿನಲ್ಲಿದ್ದಾಗ ಸಾರಥಿ ಸಿನಿಮಾ ರಿಲೀಸ್ ಮಾಡಿ ಭಾರೀ ಯಶಸ್ಸು ಕಂಡಿದ್ದ ನಿರ್ಮಾಪಕ ಸತ್ಯ ಪ್ರಕಾಶ್, ಈಗ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಡೆವಿಲ್ ಚಿತ್ರದ ನಿರ್ದೇಶಕ-ನಿರ್ಮಾಪಕ ಮಿಲನ ಪ್ರಕಾಶ್ ಅವರಿಗೆ ಧೈರ್ಯ ತುಂಬಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿರುವ ಸಂದರ್ಭದಲ್ಲಿ, ಡೆವಿಲ್ ಸಿನಿಮಾ ಬಿಡುಗಡೆಯಾಗಬೇಕಿದೆ. ಇದೇ ಪರಿಸ್ಥಿತಿ 2011ರಲ್ಲೂ ಉಂಟಾಗಿತ್ತು. ಪತ್ನಿ ವಿರುದ್ಧದ ಗೃಹ ಹಿಂಸೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ದರ್ಶನ್ ಅಭಿನಯದ ಸಾರಥಿ ಸಿನಿಮಾ ಬಿಡುಗಡೆಯಾಗಿ ದಾಖಲೆಮಾಡಿತ್ತು.
ಆಗ ಸಾಮಾಜಿಕ ಮಾಧ್ಯಮಗಳು ಇಂದಿನಷ್ಟು ಪ್ರಭಾವಿ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬೇರೆ. ಸಾಮಾಜಿಕ ಜಾಲತಾಣಗಳ ಪ್ರಭಾವ, ಅಭಿಮಾನಿಗಳ ಬೆಂಬಲ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ನಿಲುವು ಎಲ್ಲವೂ ಸೇರಿ ಡೆವಿಲ್‌ನ ಬಿಡುಗಡೆಗೆ ಬಲವಾದ ಬೆಂಬಲವನ್ನು ಸೃಷ್ಟಿಸುತ್ತವೆ. ಆದರೂ, “ಜೈಲಿನಲ್ಲಿರುವ ದರ್ಶನ್ ಸಿನಿಮಾ ಹೀರೋ ಆಗಿ ಬಂದು ಸಮಾಜಕ್ಕೆ ಸಂದೇಶ ಕೊಟ್ಟರೆ ಜನ ಸ್ವೀಕರಿಸ್ತಾರಾ?” ಅನ್ನೋ ಪ್ರಶ್ನೆ ಉಳಿದಿದೆ.
ಇದೀಗ ಸಾರಥಿ ನಿರ್ಮಾಪಕ ಸತ್ಯ ಪ್ರಕಾಶ್, ಡೆವಿಲ್ ಮೇಕರ್ ಮಿಲನ ಪ್ರಕಾಶ್ ಅವರಿಗೆ, “ರಿಲೀಸ್ ಮಾಡಿದ್ರೆ ಜನ ಬೆಂಬಲಿಸುತ್ತಾರೆ, ಭಯ ಬೇಡ” ಎಂದು ಧೈರ್ಯ ತುಂಬಿದ್ದಾರೆ. ಇದು ಚಿತ್ರರಂಗದಲ್ಲಿ ಪಾಸಿಟಿವ್ ವೈಬ್ ಸೃಷ್ಟಿಸಿದೆ. ಅದೇ ಸಮಯದಲ್ಲಿ, ಸತ್ಯ ಪ್ರಕಾಶ್ ಇದೀಗ ದುನಿಯಾ ವಿಜಯ್ ಜೊತೆ ಲ್ಯಾಂಡ್‌ಲಾರ್ಡ್ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
