Back to Top

ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ

SSTV Profile Logo SStv October 14, 2024
ದರ್ಶನ್ ನೋಡಲು ಬಂದ ಅಭಿಮಾನಿ
ದರ್ಶನ್ ನೋಡಲು ಬಂದ ಅಭಿಮಾನಿ
ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ನೋಡಲು ಟೆಡ್ಡಿಬೇರ್ ವೇಷ ಧರಿಸಿ ಅಭಿಮಾನಿಯೊಬ್ಬ ಬಳ್ಳಾರಿ ಜೈಲಿಗೆ ಬಂದಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರದ ಕಾರ್ತಿಕ್ ಎನ್ನುವ ಅಭಿಮಾನಿ ಟೆಡ್ಡಿಬೇರ್ ವೇಷ ಧರಿಸಿ ‘ವಿ ಆರ್ ವೇಟಿಂಗ್ ಫಾರ್ ಯೂ ಡಿ ಬಾಸ್’ ಎಂಬ ಸಂದೇಶದ ಫಲಕ ಹಿಡಿದು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ. ಇದೇ ವೇಳೆ ಆರೋಪಿ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದ. ಆದರೆ ಅಭಿಮಾನಿ ಕಾರ್ತಿಕ್‌ಗೆ ಜೈಲು ಸಿಬ್ಬಂದಿ ಅವಕಾಶ ನಿರಾಕರಿಸಿದರು. ಅವರ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ ಯಾರಿಗೂ ಭೇಟಿಗೆ ಅವಕಾಶ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದರು.ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಅದಷ್ಟು ಬೇಗ ನಮ್ಮ ಬಾಸ್ ಜೈಲಿನಿಂದ ಹೊರಬರಬೇಕು ಎಂದು ಹೇಳುತ್ತಾ ಅಭಿಮಾನಿ ಕಾರ್ತಿಕ್ ವಾಪಸ್‌ ತೆರಳಿದ್ದಾನೆ.