Back to Top

ಜೈಲಿನಲ್ಲಿ 100 ದಿನ ಪೂರೈಸಿದ ದರ್ಶನ್; ಜಾಮೀನು ಯಾವಾಗ?

SSTV Profile Logo SStv September 20, 2024
ಜೈಲಿನಲ್ಲಿ 100 ದಿನ ಪೂರೈಸಿದ ದರ್ಶನ್
ಜೈಲಿನಲ್ಲಿ 100 ದಿನ ಪೂರೈಸಿದ ದರ್ಶನ್
ಜೈಲಿನಲ್ಲಿ 100 ದಿನ ಪೂರೈಸಿದ ದರ್ಶನ್; ಜಾಮೀನು ಯಾವಾಗ? ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ, ಕೊಲೆ ಕೇಸಿನಲ್ಲಿ ಜೈಲು ಸೇರಿ ಈಗ 100 ದಿನಗಳನ್ನು ಪೂರೈಸಿದ್ದಾರೆ. ದರ್ಶನ್‌ ನೂರು ದಿನಗಳಲ್ಲಿ ಜಾಮೀನು ಸಿಗುವುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು, ಆದರೆ ಇದುವರೆಗೆ ಜಾಮೀನು ಅರ್ಜಿ ಸಲ್ಲಿಸಿಲ್ಲ. ಬಳ್ಳಾರಿ ಜೈಲಿನಲ್ಲಿ ಕಠಿಣ ನಿಯಮಗಳನ್ನು ಅನುಭವಿಸುತ್ತಿರುವ ದರ್ಶನ್‌ ಅವರು ಸೌಲಭ್ಯಗಳ ಕೊರತೆಯಿಂದ ಬೇಸರಗೊಂಡಿದ್ದಾರೆ. ದರ್ಶನ್‌ ತಮ್ಮ ಜಾಮೀನು ಅರ್ಜಿ ಸಲ್ಲಿಸದಿರುವುದು ಮತ್ತು ಇನ್ನೂ ಆರು ತಿಂಗಳ ಕಾಲ ಜಾಮೀನು ಸಿಗುವ ಸಾಧ್ಯತೆ ಇರುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ನಿರಾಶೆಯನ್ನು ತಂದಿದೆ.