ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚೆಗೆ ‘ಕಾಂತಾರ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಅವರು ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ರಿಷಬ್ ಶೆಟ್ಟಿ ಮಾತನಾಡಿ, "ಕಾಂತಾರ" ಸಿನಿಮಾ ದೈವರಾಧನೆ ಮತ್ತು ದೈವ ನರ್ತಕರ ಸಮುದಾಯದ ಬಗ್ಗೆ ಇದೆ. ನ್ಯಾಷನಲ್ ಅವಾರ್ಡ್ ದೈವ ನರ್ತಕರ ಸಮುದಾಯಕ್ಕೆ ಸೇರಬೇಕು ಎಂದರು. ದೈವದ ಆಶೀರ್ವಾದವಿಲ್ಲದೇ ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಭಾವೋದ್ವೇಗ ವ್ಯಕ್ತಪಡಿಸಿದರು.
"ಕಾಂತಾರ ಚಾಪ್ಟರ್ 1" ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ ಎಂದ ರಿಷಬ್ ಶೆಟ್ಟಿ, ಈ ಚಿತ್ರವು ಮೊದಲ ಭಾಗಕ್ಕಿಂತ ಹೆಚ್ಚಿನ ಹೆಮ್ಮೆ ತರುವಂತಿದೆ ಎಂದು ಅಭಿಪ್ರಾಯಪಟ್ಟರು.