ಕ್ಲಾಸಿಕ್ ಲುಕ್ನಲ್ಲಿ ಮಿಂಚಿದ ದೀಪಿಕಾ ದಾಸ್ – ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್!


ಕನ್ನಡದ ಜನಪ್ರಿಯ ನಟಿ ದೀಪಿಕಾ ದಾಸ್, ಬಿಗ್ ಬಾಸ್ ಹಾಗೂ ನಾಗಿಣಿ ಧಾರಾವಾಹಿಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು. ಕೆಲಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಳ್ಳುವೆನೆಂದು ಹೇಳಿದ್ದರೂ, ಇದೀಗ ಅವರು ಮರಳಿ ಫುಲ್ ಆಕ್ಟೀವ್ ಆಗಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸದ್ಯ ದೀಪಿಕಾ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ತಾಜಾ ಪೋಸ್ಟ್ಗಳಲ್ಲಿ ತಮ್ಮ ಕ್ಲಾಸಿಕ್ ಲುಕ್ ಮೂಲಕ ಜನರ ಮನಸೆಳೆಯುತ್ತಿದ್ದಾರೆ.
ದೀಪಿಕಾ ದಾಸ್ ಬಿಗ್ ಬಾಸ್ ಕನ್ನಡ ಸೀಸನ್ 7 ಮತ್ತು 9ರಲ್ಲಿ ಕಾಣಿಸಿಕೊಂಡಿದ್ದರು. 2023ರ ಮಾರ್ಚ್ 1ರಂದು ಗೋವಾದಲ್ಲಿ ತಮ್ಮ ಗೆಳೆಯ, ಉದ್ಯಮಿ ದೀಪಕ್ ಗೌಡ ಅವರನ್ನು ಪರಸ್ಪರ ಪ್ರೀತಿಯಿಂದ ಮದುವೆಯಾದರು. ದೀಪಕ್ ಗೌಡ ರಿಯಲ್ ಎಸ್ಟೇಟ್ ಮತ್ತು ಐಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ.
ಗೋವಾದಲ್ಲಿ ಆಯೋಜಿಸಿದ್ದ ಡೆಸ್ಟಿನೇಶನ್ ವೆಡ್ಡಿಂಗ್ ಫೋಟೋಗಳು ಆಗಲೇ ವೈರಲ್ ಆಗಿದ್ದವು. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮದುವೆಯೇ ದೀಪಿಕಾ ಅವರ ಕನಸಾಗಿತ್ತು.ಮದುವೆಯ ಬಳಿಕವೂ ದೀಪಿಕಾ ಸಿನಿರಂಗ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ಸ್ಟೈಲಿಷ್ ಅಪ್ಡೇಟ್ಗಳ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸುತ್ತಿದ್ದಾರೆ. ದೀಪಿಕಾ ದಾಸ್ ಅವರ ಕ್ಲಾಸಿಕ್ ಲುಕ್ ಈಗ ಅಭಿಮಾನಿಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
