Back to Top

ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ ಪೊಲೀಸರು ಕಾರಣ ಏನು

SSTV Profile Logo SStv October 10, 2024
ಕಾರು ಜಪ್ತಿ ಮಾಡಿದ ಪೊಲೀಸರು ಕಾರಣ
ಕಾರು ಜಪ್ತಿ ಮಾಡಿದ ಪೊಲೀಸರು ಕಾರಣ
ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ ಪೊಲೀಸರು ಕಾರಣ ಏನು ಖ್ಯಾತ ನಟಿ ರಚಿತಾ ರಾಮ್ ಅವರ ಅಸಿಸ್ಟೆಂಟ್ ಬಳಸುತ್ತಿದ್ದ ಇನ್ನೋವಾ ಕಾರು ಪೊಲೀಸರಿಂದ ಜಪ್ತಿ ಮಾಡಲಾಗಿದೆ. ಈ ವಾಹನವನ್ನು ಚಲನಚಿತ್ರ ಚಿತ್ರೀಕರಣಕ್ಕೆ ಕಲಾವಿದರನ್ನು ಕರೆತರಲು ವೈಟ್ ಬೋರ್ಡ್‌ ವಾಹನ (ನೀಜೀ ಬಳಕೆ) ಎಂಬುದಾಗಿ ಬಳಸಲಾಗಿತ್ತು, ಇದು ನಿಯಮ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ತುಮಕೂರಿನಲ್ಲಿ ಚಿತ್ರೀಕರಣದ ಸ್ಥಳದ ಬಳಿ ಈ ಕಾರನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸಬೇಕಾದ ಎಲೆೋ ಬೋರ್ಡ್ ಬದಲಾಗಿ ವೈಟ್ ಬೋರ್ಡ್ ಕಾರು ಬಳಸಲಾಗಿದ್ದು, ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೆಷನ್ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.