Back to Top

ಬಿಲ್ಲ ರಂಗ ಬಾಷ ಸೆಟ್ ರಿವೀಲ್: ಸೆಟ್‌ ಫೋಟೋ ವೈರಲ್, ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕುತೂಹಲ!

SSTV Profile Logo SStv June 24, 2025
ಬಿಲ್ಲ ರಂಗ ಬಾಷ ಸೆಟ್ ರಿವೀಲ್
ಬಿಲ್ಲ ರಂಗ ಬಾಷ ಸೆಟ್ ರಿವೀಲ್

ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ಬಿಲ್ಲ ರಂಗ ಬಾಷ’  ಈಗಾಗಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಿಂದ ಸುದೀಪ್ ಭವಿಷ್ಯದ ಜಗತ್ತು ಗೆ ಕಾಲಿಡುತ್ತಿದ್ದಾರೆ.

ಇದೀಗ, ಈ ಚಿತ್ರಕ್ಕೆ ಸಂಬಂಧಿಸಿದಂತೆ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾದ ಸೆಟ್‌ನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸೆಟ್‌ನಲ್ಲಿ ವಿಂಟೇಜ್ ಕಾರುಗಳು, ಔಟ್‌ಡೋರ್ ಫಿಲ್ಮಿಂಗ್, ಹಾಗೂ ದೂರದಿಂದ ಕಾಣುವ ಕಿಚ್ಚ ಸುದೀಪ್‌ ಲುಕ್ ಚಿತ್ರಕ್ಕಿದ್ದ ವಿಭಿನ್ನತೆಯನ್ನು ತೋರಿಸುತ್ತಿದೆ.

ಚಿತ್ರದ ಮೊದಲ ಶೆಡ್ಯೂಲ್‌ಗೆ ಬ್ರೇಕ್ ನಂತರ ಶೂಟಿಂಗ್ ಪುನಾರಂಭ, ಮುಂದಿನ ಹಂತದ ಸನ್ನಿವೇಶಗಳ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಲುಕ್ನಲ್ಲಿ ಹೆಚ್ಚಿನ ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.