'ಬಿಲ್ಲ ರಂಗಾ ಬಾಷಾ' ಸಿನಿಮಾದ ಹೊಸ ಅಪ್ಡೇಟ್ ಲುಕ್ ಟೆಸ್ಟ್ ಮ್ಯಾಟರ್ ಬಹಿರಂಗ
ಕಿಚ್ಚ ಸುದೀಪ್ ಅವರ ಬಿಲ್ಲ ರಂಗಾ ಬಾಷಾ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ. ಸುದೀಪ್ ಟ್ರಿಪಲ್ ರೋಲ್ ಮಾಡುತ್ತಿರುವ ಈ ಚಿತ್ರದಲ್ಲಿ, ಲುಕ್ ಟೆಸ್ಟ್ ನಡೆಯುತ್ತಿದ್ದು, ಅದಕ್ಕಾಗಿ ಬಿಗ್ ಬಾಸ್ ಪ್ರೆಸ್ ಮೀಟ್‌ಗೆ ಲೇಟ್ ಆಗಿದ್ದೇನೆ ಎಂದು ಸುದೀಪ್ ತಮಾಷೆಯಾಗಿ ಹೇಳಿದ್ದಾರೆ.
ಈ ಬಿಗ್ ಬಜೆಟ್ ಸಿನಿಮಾದ ಡೈರೆಕ್ಟರ್ ಅನೂಪ್ ಭಂಡಾರಿ, ಸ್ಕ್ರಿಪ್ಟ್ ಮೇಲೆ ವರ್ಷಗಳ ಕಾಲ ಕೆಲಸ ಮಾಡಿದ್ದು, ವಿಕ್ರಾಂತ್ ರೋಣ ನಂತರ ಈ ಪ್ರಾಜೆಕ್ಟ್ ಶುರುವಾಗಿತ್ತು.
ಬಿಲ್ಲ ರಂಗಾ ಬಾಷಾ ಚಿತ್ರವು ಸುದೀಪ್ ಜನ್ಮದಿನದಂದು ಅನೌನ್ಸ್ ಆಗಿದ್ದು, ಟೈಟಲ್ ಟೀಸರ್ ಕೂಡ ಬಿಡುಗಡೆಯಾಗಿದೆ. ಆದರೆ, ಚಿತ್ರ ಮುಹೂರ್ತ ಮತ್ತು ಇತರ ವಿಚಾರಗಳು ಯಾವಾಗನೆಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.