Back to Top

BIGG BOSS 11 ಶುರುವಾಗಲು ದಿನಗಣನೆ.. ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ

SSTV Profile Logo SStv September 25, 2024
BIGG BOSS 11 ಶುರುವಾಗಲು ದಿನಗಣನೆ
BIGG BOSS 11 ಶುರುವಾಗಲು ದಿನಗಣನೆ
BIGG BOSS 11 ಶುರುವಾಗಲು ದಿನಗಣನೆ.. ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ ಕನ್ನಡದ ಬಹುನಿರೀಕ್ಷಿತ ಬಿಗ್ ಬಾಸ್ ಸೀಸನ್ 11 ಶುರುವಾಗಲು ಕೇವಲ 4 ದಿನಗಳು ಬಾಕಿಯಿದ್ದು, ವೀಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ತಂಡ ಈಗಾಗಲೇ ಪ್ರೋಮೋ ರಿಲೀಸ್ ಮಾಡಿ ಜನರನ್ನು ಆಕರ್ಷಿಸಿದೆ. ಈ ಬಾರಿಯ ಸೀಸನ್ ವಿಶೇಷವಾಗಿದ್ದು, ಶನಿವಾರ ನಡೆಯುವ ರಾಜಾ-ರಾಣಿ ಗ್ರ್ಯಾಂಡ್ ಫಿನಾಲೆ ವೇಳೆ ಐದು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ತಿಳಿಸಲಾಗಿದೆ. ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ವೋಟ್ ಮಾಡುವ ಮೂಲಕ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಬಹುದು. ಬಿಗ್ ಬಾಸ್ 11 ಲೋಗೋದಲ್ಲಿ ಬೆಂಕಿ ಮತ್ತು ನೀರಿನ ತೇರು, ಆಕ್ರೋಶ ಹಾಗೂ ಭಾವನಾತ್ಮಕ ಕ್ಷಣಗಳ ಸೂಚನೆ ನೀಡುತ್ತಿದೆ.