Back to Top

'ಬಿಗ್ ಬಾಸ್'ಗೆ ಸುದೀಪ್ ಕೊಟ್ಟ ಕೊಡುಗೆ ಬಗ್ಗೆ ಹೆಮ್ಮೆಯಿದೆ ಸಾನ್ವಿ ಸುದೀಪ್

SSTV Profile Logo SStv October 14, 2024
'ಬಿಗ್ ಬಾಸ್'ಗೆ ಸುದೀಪ್ ಕೊಟ್ಟ ಕೊಡುಗೆ
'ಬಿಗ್ ಬಾಸ್'ಗೆ ಸುದೀಪ್ ಕೊಟ್ಟ ಕೊಡುಗೆ
'ಬಿಗ್ ಬಾಸ್'ಗೆ ಸುದೀಪ್ ಕೊಟ್ಟ ಕೊಡುಗೆ ಬಗ್ಗೆ ಹೆಮ್ಮೆಯಿದೆ ಸಾನ್ವಿ ಸುದೀಪ್ 'ಬಿಗ್ ಬಾಸ್ ಕನ್ನಡ 11' ನ ನಂತರ ಕಿಚ್ಚ ಸುದೀಪ್ ನಿರೂಪಣೆಯಿಂದ ವಿದಾಯ ಹೇಳಲು ನಿರ್ಧಾರ ಮಾಡಿಕೊಂಡಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಸುದೀಪ್ ಅವರ ಮಗಳು ಸಾನ್ವಿ, ತಂದೆಯ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಗ್ ಬಾಸ್ ಶೋಗೆ ಸುದೀಪ್ ನೀಡಿದ ಶ್ರಮ ಮತ್ತು ಕೊಡುಗೆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. "ಅಪ್ಪ, ನಿಮ್ಮ ಬಿಗ್ ಬಾಸ್ ಜರ್ನಿ ಹೆಮ್ಮೆಪಡುವಂತದ್ದು. ನೀವು ಶೋಗೆ ನೀಡಿದ ಕೊಡುಗೆ ಅಪ್ರತಿಮ, ಮತ್ತು ನಿಮ್ಮ ರೀತಿ ಬೇರಾರು ಮಾಡೋದು ಅಸಾಧ್ಯ" ಎಂದು ಸಾನ್ವಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಈಗ, ಸುದೀಪ್ ಅವರ ಈ ನಿರ್ಧಾರವನ್ನು ಅಭಿಮಾನಿಗಳು ಗೌರವಿಸುತ್ತಾರೆ ಎಂಬ ನಂಬಿಕೆಯಿದೆ. 'ಬಿಗ್ ಬಾಸ್' ವೇದಿಕೆಯ ಮೇಲೆ ಸುದೀಪ್ ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.