Back to Top

ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ ಇದೇ ಕೊನೆಯ ಸೀಸನ್ ಅಧಿಕೃತ ಘೋಷಣೆ

SSTV Profile Logo SStv October 14, 2024
ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ
ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ
ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ ಇದೇ ಕೊನೆಯ ಸೀಸನ್ ಅಧಿಕೃತ ಘೋಷಣೆ ಸತತ 11 ವರ್ಷಗಳ ಕಾಲ ‘ಬಿಗ್​ ಬಾಸ್​ ಕನ್ನಡ’ ನಿರೂಪಣೆ ಮಾಡಿದ ಕಿಚ್ಚ ಸುದೀಪ್, ಈಗ ಈ ರಿಯಾಲಿಟಿ ಶೋನಿಂದ ನಿವೃತ್ತಿ ಘೋಷಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ’ ಸೀಸನ್​ 11 ಅವರ ಕೊನೆಯ ಸೀಸನ್ ಆಗಿದ್ದು, ಈ ಕುರಿತು ಸುದೀಪ್ ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. "ಈ 10+1 ವರ್ಷಗಳ ಪಯಣ ತುಂಬಾ ಚೆನ್ನಾಗಿತ್ತು. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್" ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸುದೀಪ್ ಅವರ ಈ ನಿರ್ಧಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ, ಆದರೆ ಅವರು ಈ ನಿರ್ಧಾರವನ್ನು ಗೌರವಿಸುತ್ತಿದ್ದಾರೆ.