Back to Top

‘ಬಿಗ್​​​ಬಾಸ್​​​ ಸಹವಾಸ ಸಾಕು ಅನಿಸಿದ್ದು ನಿಜ’ ಅಚ್ಚರಿ ಹೇಳಿಕೆ ಕೊಟ್ಟ ನಟ ಸುದೀಪ್

SSTV Profile Logo SStv September 23, 2024
‘ಬಿಗ್​​​ಬಾಸ್​​​ ಸಹವಾಸ ಸಾಕು ಅನಿಸಿದ್ದು ನಿಜ’
‘ಬಿಗ್​​​ಬಾಸ್​​​ ಸಹವಾಸ ಸಾಕು ಅನಿಸಿದ್ದು ನಿಜ’
‘ಬಿಗ್​​​ಬಾಸ್​​​ ಸಹವಾಸ ಸಾಕು ಅನಿಸಿದ್ದು ನಿಜ’ ಅಚ್ಚರಿ ಹೇಳಿಕೆ ಕೊಟ್ಟ ನಟ ಸುದೀಪ್​​ ಬಿಗ್​ಬಾಸ್ ಕನ್ನಡ 11ನೇ ಸೀಸನ್ ಸೆಪ್ಟೆಂಬರ್ 29ರಿಂದ ಆರಂಭವಾಗಲಿದ್ದು, ಸುದೀಪ್ ಮತ್ತೆ ನಿರೂಪಕರಾಗಿ ವಾಪಸ್ ಆಗಿದ್ದಾರೆ. ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ, "ಬಿಗ್​ಬಾಸ್ ಸಹವಾಸ ಸಾಕು ಅನಿಸಿತ್ತು, ಆದರೆ ಸಿನಿಮಾದತ್ತ ಗಮನ ಹರಿಸಬೇಕೆಂದುಕೊಂಡಿದ್ದೆ. ಕೊನೆಗೆ ಬಿಗ್​ಬಾಸ್ ಟೀಮ್ ನನ್ನನ್ನು ಮನವೊಲಿಸಿತು," ಎಂದು ಸುದೀಪ್ ಹೇಳಿದ್ದಾರೆ. ಈ ಹಿಂದೆ ಸುದೀಪ್ ಶೋನಿಂದ ಹಿಂದೆ ಸರಿಯಲಿದ್ದಾರೆ ಎಂಬ ವದಂತಿಗಳು ಹರಿದಾಡಿದರೂ, ಅವಕ್ಕೆ ಕೊನೆಗೂ ತಾವು ಫುಲ್ ಸ್ಟಾಪ್ ಇಟ್ಟಿದ್ದಾರೆ. 11ನೇ ಸೀಸನ್‌ಗೆ ಫ್ಯಾನ್ಸ್ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ, ಮತ್ತು ಸುದೀಪ್ ಅವರ ನಿರೂಪಣೆಯನ್ನು ಆನಂದಿಸಲು ಸಿದ್ಧರಾಗಿದ್ದಾರೆ.