Back to Top

ಬಿಗ್ ಬಾಸ್ ಮನೆಯಲ್ಲಿ ಬೀಪ್‌ಗಳ ಮಳೆ, ವೀಕ್ಷಕರಿಗೆ ಅಸಹ್ಯ

SSTV Profile Logo SStv October 18, 2024
ಬಿಗ್ ಬಾಸ್ ಮನೆಯಲ್ಲಿ ಬೀಪ್‌ಗಳ ಮಳೆ
ಬಿಗ್ ಬಾಸ್ ಮನೆಯಲ್ಲಿ ಬೀಪ್‌ಗಳ ಮಳೆ
ಬಿಗ್ ಬಾಸ್ ಮನೆಯಲ್ಲಿ ಬೀಪ್‌ಗಳ ಮಳೆ, ವೀಕ್ಷಕರಿಗೆ ಅಸಹ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಜಗದೀಶ್ ಹಾಗೂ ಇತರ ಸ್ಪರ್ಧಿಗಳ ನಡುವಿನ ಕಿರಿಕಿರಿಯಿಂದ ಮನೆಯ ವಾತಾವರಣ ತೀವ್ರ ಹದಗೆಟ್ಟಿದೆ. ಜಗದೀಶ್‌ ಹಂಸಾ ವಿರುದ್ಧ ಬಳಸಿದ ಅವಾಚ್ಯ ಶಬ್ದಗಳಿಂದ ಇಡೀ ಮನೆಯಲ್ಲಿ ಜಗಳದ ಜ್ವಾಲೆ ಮೂಡಿತು. ಬಿಗ್ ಬಾಸ್‌ ಮತ್ತೆ ಎಚ್ಚರಿಸಿದರೂ, ಜಗದೀಶ್ ಮತ್ತು ರಂಜಿತ್‌ ಕೆಟ್ಟ ಮಾತುಗಳಿಂದ ಒಬ್ಬರಿಗೊಬ್ಬರು ಗದರಿಸಿದರು. ಇಡೀ ಎಪಿಸೋಡ್‌ ತುಂಬಾ ಬೀಪ್‌ ಶಬ್ದಗಳಿಂದ ತುಂಬಿದ್ದು, ವೀಕ್ಷಕರಲ್ಲಿ ಅಸಹ್ಯವನ್ನು ಹುಟ್ಟಿಸಿದೆ. ಮಹಿಳೆಯರಿಗೆ ಅವಮಾನ ಮಾಡಿದ ಕಾರಣಕ್ಕೆ ಜಗದೀಶ್‌ ಮತ್ತು ಜಗಳದಲ್ಲಿ ಭಾಗಿಯಾದ ರಂಜಿತ್‌ ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ.