Back to Top

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಕಿರಿಕ್ ಹಂಸಾ ಕೋಪದಲ್ಲಿ

SSTV Profile Logo SStv October 9, 2024
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಕಿರಿಕ್
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಕಿರಿಕ್
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಕಿರಿಕ್ ಹಂಸಾ ಕೋಪದಲ್ಲಿ ಸ್ವರ್ಗದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಹಾರಾಡುತ್ತಿದ್ದ ಜಗದೀಶ್​ ಅವರು ನರಕಕ್ಕೆ ಬಂದರೂ ಬದಲಾಗಿಲ್ಲ. ನರಕದಲ್ಲಿಯೂ ಅವರು ಕಿರಿಕ್​ ಮಾಡುತ್ತಿದ್ದಾರೆ. ಕ್ಯಾಪ್ಟನ್​ ಆಗಿರುವ ಹಂಸಾಗೆ ಜಗದೀಶ್​ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಆಗಿದೆ. ಉದ್ದೇಶಪೂರ್ವಕವಾಗಿಯೇ ಜಗದೀಶ್​ ಕಿರಿಕ್ ಮಾಡುತ್ತಿದ್ದಾರೆ. ಏಕವಚನದಲ್ಲೂ ಮಾತನಾಡಿ ಕೆಣಕುತ್ತಿದ್ದಾರೆ.ಸ್ವರ್ಗದಲ್ಲಿ ಇದ್ದ ಜಗದೀಶ್, ಕಿರಿಕ್ ಮಾಡಿದ ಕಾರಣದಿಂದ ಹಂಸಾ ಅವರ ಅಧಿಕಾರ ಬಳಸಿ, ಅವರನ್ನು ನರಕಕ್ಕೆ ಕಳಿಸಿದರು. ಇದರಿಂದ ಅವರ ನಡುವೆ ಮತ್ತಷ್ಟು ಗಲಾಟೆ ಆರಂಭವಾಯಿತು. ಜಗದೀಶ್ ತಾವು ತಪ್ಪು ಮಾಡದಂತೆ ವರ್ತಿಸುತ್ತಿದ್ದರೂ, ಹಂಸಾ ಅವರಿಗೆ ‘ಕ್ಯಾಪ್ಟನ್ ಗೆ ಮರ್ಯಾದೆ ಕೊಡಿ’ ಎಂದು ಬೇಡಿಕೊಳ್ಳುವಷ್ಟರ ಮಟ್ಟಿಗೆ ದಿಕ್ಕೆಟ್ಟಿದ್ದಾರೆ.ಇದು ಬಿಗ್ ಬಾಸ್ ಮನೆಗೆ ಮತ್ತಷ್ಟು ಡ್ರಾಮಾ ಮತ್ತು ಕುತೂಹಲ ತುಂಬಿದೆ, ಎರಡನೇ ವಾರದಲ್ಲಿ ಯಾರಿಗೆ ಏನಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ.