Back to Top

ದರ್ಶನ್ ಜಾಮೀನು ಅರ್ಜಿ ಬಳ್ಳಾರಿ ಜೈಲಿನಲ್ಲಿ ವಕೀಲರೊಂದಿಗೆ ಚರ್ಚೆ

SSTV Profile Logo SStv September 24, 2024
ಬಳ್ಳಾರಿ ಜೈಲಿನಲ್ಲಿ ವಕೀಲರೊಂದಿಗೆ ಚರ್ಚೆ
ಬಳ್ಳಾರಿ ಜೈಲಿನಲ್ಲಿ ವಕೀಲರೊಂದಿಗೆ ಚರ್ಚೆ
ದರ್ಶನ್ ಜಾಮೀನು ಅರ್ಜಿ ಬಳ್ಳಾರಿ ಜೈಲಿನಲ್ಲಿ ವಕೀಲರೊಂದಿಗೆ ಚರ್ಚೆ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಜೈಲಿನಲ್ಲಿ ಇದ್ದು, ಇದೀಗ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ. ಈ ಸಂಬಂಧ ದರ್ಶನ್ ಪರ ವಕೀಲರು ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಕೇಸ್ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ, ವಕೀಲರು ಹಾಗೂ ದರ್ಶನ್ ಜಾಮೀನು ಅರ್ಜಿಯ ಪ್ರಗತಿ, ಸಾಕ್ಷ್ಯ ಮತ್ತು ಮುಂದಿನ ಕಾನೂನು ಹೋರಾಟದ ಕುರಿತು ಮಾತುಕತೆ ನಡೆಸಿದರು. ದರ್ಶನ್ ಅವರು ಕೆಲವು ಅರ್ಜಿಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಇದರೊಂದಿಗೆ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿವೆ, ಅವುಗಳಲ್ಲಿ ಬೆನ್ನು ನೋವು ಪ್ರಮುಖವಾಗಿದೆ.