Back to Top

ಐಫಾ ವೇದಿಕೆ ಮೇಲೆ ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ

SSTV Profile Logo SStv September 28, 2024
ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ
ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ
ಐಫಾ ವೇದಿಕೆ ಮೇಲೆ ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ ರಿಷಬ್ ಶೆಟ್ಟಿ ಅವರಿಗೆ ಐಫಾ (ಐಐಎಫ್​ಎ) ಕಾರ್ಯಕ್ರಮದಲ್ಲಿ ‘ಔಟ್​ಸ್ಟ್ಯಾಂಡಿಂಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೇದಿಕೆ ಮೇಲೆ ಆಗಮಿಸಿದ ಅವರು ಅವಾರ್ಡ್ ಸ್ವೀಕರಿಸಿದ್ದಾರೆ ಐಫಾ ವೇದಿಕೆ ಮೇಲೆ ರಿಷಬ್ ಶೆಟ್ಟಿ ಅವರು ಅವಾರ್ಡ್ ಗೆದ್ದು ಬೀಗಿದ್ದಾರೆ. ಅಬುಧಾಬಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಕನ್ನಡ ಕಲಾವಿದರ ಸಮಾಗವೂ ಈ ವೇದಿಕೆ ಮೇಲೆ ಆಯಿತು.ರಿಷಬ್ ಶೆಟ್ಟಿ ಅವರಿಗೆ ಐಫಾ (ಐಐಎಫ್​ಎ) ಕಾರ್ಯಕ್ರಮದಲ್ಲಿ ‘ಔಟ್​ಸ್ಟ್ಯಾಂಡಿಂಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೇದಿಕೆ ಮೇಲೆ ಆಗಮಿಸಿದ ಅವರು ಅವಾರ್ಡ್ ಸ್ವೀಕರಿಸಿದ್ದಾರೆ. ಕನ್ನಡದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ರಿಷಬ್ ಶೆಟ್ಟಿಗೆ ಈ ಅವಾರ್ಡ್ ನೀಡಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಸಂದರ್ಭದಲ್ಲಿ ಆ್ಯಂಕರ್ ಅಕುಲ್ ಬಾಲಾಜಿ ಕೂಡ ಇದ್ದರು.ಅವಾರ್ಡ್ ಪಡೆದ ಬಳಿಕ ಪತ್ನಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಶೆಟ್ಟಿ ಅವರು ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿವೆ. ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ನಿರ್ದೇಶಕ ಪ್ರಶಾಂತ್ ನೀಲ್, ನಟ ಜೂನಿಯರ್ ಎನ್​ಟಿಆರ್ ಅವರನ್ನು ಭೇಟಿ ಆಗಿದ್ದರು.