Back to Top

ದರ್ಶನ್ ಜಾಮೀನು ಅರ್ಜಿಯಲ್ಲಿ ಆಸ್ತಿ ವಿವರ ಬಹಿರಂಗ

SSTV Profile Logo SStv September 27, 2024
ಅರ್ಜಿಯಲ್ಲಿ ಆಸ್ತಿ ವಿವರ ಬಹಿರಂಗ
ಅರ್ಜಿಯಲ್ಲಿ ಆಸ್ತಿ ವಿವರ ಬಹಿರಂಗ
ದರ್ಶನ್ ಜಾಮೀನು ಅರ್ಜಿಯಲ್ಲಿ ಆಸ್ತಿ ವಿವರ ಬಹಿರಂಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಸೆಪ್ಟೆಂಬರ್ 27) ನಡೆಯಲಿದೆ. ದರ್ಶನ್‌ ಅವರ ಆಸ್ತಿ ಮತ್ತು ಸಾಮಾಜಿಕ ಕಾರ್ಯಗಳು ಈ ಅರ್ಜಿಯ ಪ್ರಮುಖ ಅಂಶಗಳಾಗಿದ್ದು, ಬೆಳ್ಳಂದೂರಿನಲ್ಲಿ ಕೋಟ್ಯಂತರ ಮೌಲ್ಯದ ನಿವೇಶನ, ರಾಜರಾಜೇಶ್ವರಿ ನಗರ ಮತ್ತು ಮಲ್ಲತ್‌ಹಳ್ಳಿಯಲ್ಲಿ ಮನೆಗಳು, ಹಾಗೂ ದೇವನಹಳ್ಳಿಯ ಫ್ಲಾಟ್ ಕುರಿತ ವಿವರಗಳು ಅವುಗಳಲ್ಲಿ ಸೇರಿವೆ. ಪರಪ್ಪನ ಅಗ್ರಹಾರ ಜೈಲಿನಿಂದ ತಿಂಗಳ ಹಿಂದೆ ಬಳ್ಳಾರಿ ಜೈಲುಗೆ ಸ್ಥಳಾಂತರಗೊಂಡ ದರ್ಶನ್, ನಾಲ್ಕು ತಿಂಗಳಿಂದ ಬಂಧಿತನಾಗಿದ್ದು, ಅವರ ಮುಗ್ಧತೆ ಮತ್ತು ಸಮಾಜ ಸೇವೆ ಅರ್ಜಿಯಲ್ಲಿ ತೀವ್ರವಾಗಿ ಪ್ರಸ್ತಾಪಿಸಲಾಗಿದೆ. ಜೊತೆಗೆ, ಅವರ ಚಿತ್ರಗಳಲ್ಲಿ ಅಭಿನಯಿಸಿದರೆ ಅನೇಕರು ಉದ್ಯೋಗ ಪಡೆಯುತ್ತಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಆದಾಯ ತೆರಿಗೆ ಇಲಾಖೆ ದರ್ಶನ್ ಅವರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಣಕಾಸು ವ್ಯವಹಾರಗಳ ವಿಚಾರದಲ್ಲಿ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಗ್ಗೆ ವರದಿಯಾಗಿದೆ.