ಅನುಶ್ರೀ ಮದುವೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ವಿಶೇಷ ಅತಿಥಿ – ಕಾರಣವೇನು ಗೊತ್ತಾ?


ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ರೋಷನ್ ಜೊತೆ ಅನುಶ್ರೀ ಅವರು ಮದುವೆಯ ಪೀಠಕ್ಕೆ ಏರಿದ್ದು, ಈ ಮದುವೆ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್, ತಿಟ್ಟಹಳ್ಳಿ, ಕಗ್ಗಲಿಪುರ ನಲ್ಲಿ ವೈಭವವಾಗಿ ನೆರವೇರಿತು. ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಜೀವನ ಹೂಡಿರುವ ಅನುಶ್ರೀ ಅವರ ಮದುವೆಯಲ್ಲಿ ಕಲೆ-ಸಾಹಿತ್ಯ ಕ್ಷೇತ್ರದ ಅನೇಕ ಗಣ್ಯರು ಭಾಗಿಯಾಗಿದ್ದರು.
ಈ ಮದುವೆ ಸಮಾರಂಭದಲ್ಲಿ ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ತರುಣ್ ಸುಧೀರ್, ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್, ರಚಿತಾ ರಾಮ್, ತಾರಾ, ಕಿಶೋರ್, ಶಿವಣ್ಣ-ಗೀತಾ ದಂಪತಿ, ಡಾಲಿ ಧನಂಜಯ್, ಸಂತೋಷ್ ಆನಂದ್‌ರಾಮ್, ಪ್ರೇಮಾ, ಶ್ವೇತಾ ಚೆಂಗಪ್ಪ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್, ವಿಜಯ್ ರಾಘವೇಂದ್ರ ಸೇರಿದಂತೆ ಅನೇಕ ತಾರಾ-ತಾರೆಯರು ನವ ದಂಪತಿಗೆ ಶುಭ ಹಾರೈಸಿದರು.
ಮದುವೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನುಶ್ರೀ, ತಮ್ಮ ಮದುವೆಯ ವಿಶೇಷ ಅತಿಥಿಯಾಗಿ ಬಂದಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಹೃದಯಂಗಮವಾದ ಭಾವನೆ ಹಂಚಿಕೊಂಡರು:
“ಆ ನಟಿಯನ್ನು ನನ್ನ ಮದುವೆಗೆ ಬರುವಂತೆ ಮಾಡಿದ್ದು ಕೊರಗಜ್ಜನೇ. ರಚಿತಾ ರಾಮ್ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ನನಗೂ ನಂಬಲು ಆಗಲಿಲ್ಲ. ಆದರೆ, ಅವರು ನಮ್ಮ ಮದುವೆಗೆ ಬಂದು ಆಶೀರ್ವಾದ ಮಾಡಿರುವುದು ನನಗೆ ತುಂಬಾ ಸಂತೋಷ ತಂದಿದೆ. ಅವರು ಕೊರಗಜ್ಜನನ್ನು ತುಂಬಾ ನಂಬುತ್ತಾರೆ, ನಾನೂ ಕೂಡಾ ಅದೇ ನಂಬಿಕೆ ಇಟ್ಟಿದ್ದೇನೆ. ಅಜ್ಜನೇ ಅವರನ್ನು ನನ್ನ ಮದುವೆಗೆ ಕಳುಹಿಸಿದ್ದಾರೆ” ಎಂದು ಭಾವೋದ್ರಿಕ್ತರಾಗಿದ್ದರು.
ಅನುಶ್ರೀ ಮದುವೆಯ ಈ ಕ್ಷಣವು ಅಭಿಮಾನಿಗಳಿಗೆ ವಿಶೇಷವಾಗಿದ್ದು, ವಿಶೇಷವಾಗಿ ರಚಿತಾ ರಾಮ್ ಹಾಜರಾತಿ ಎಲ್ಲರಿಗೂ ಆನಂದ ತಂದಿದೆ. ಸ್ಯಾಂಡಲ್‌ವುಡ್‌ನ ಎರಡು ಮೆಚ್ಚಿನ ಮುಖಗಳು ಒಂದೇ ವೇದಿಕೆಯಲ್ಲಿ ಒಂದಾಗಿ ಕಾಣಿಸಿಕೊಂಡ ಕ್ಷಣ, ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿ ನೆನಪು ಮೂಡಿಸಿದೆ. ಅನುಶ್ರೀ-ರೋಷನ್ ದಾಂಪತ್ಯ ಜೀವನಕ್ಕೆ ಶುಭ ಹಾರೈಸೋಣ!
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
