Back to Top

ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

SSTV Profile Logo SStv September 30, 2024
ಅನುಷಾ ರೈ, ಧರ್ಮ ಕೀರ್ತಿರಾಜ್‌
ಅನುಷಾ ರೈ, ಧರ್ಮ ಕೀರ್ತಿರಾಜ್‌
ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌ ಅದ್ಧೂರಿಯಾಗಿ ಪ್ರಾರಂಭಗೊಂಡಿರುವ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ 5ನೇ ಸ್ಪರ್ಧಿಯಾಗಿ ಅನುಷಾ ರೈ ಮತ್ತು 6ನೇ ಸ್ಪರ್ಧಿಯಾಗಿ ನಟ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಿದ್ದಾರೆ. ಅನನ್ಯ ಸನ್ನಿವೇಶದಲ್ಲಿ ಇಬ್ಬರೂ ಜೊತೆಯಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರವೇಶಿಸಿದರು. ಅನುಷಾ ರೈ ಅವರು ಧರ್ಮ ಅವರ ಹೆಸರನ್ನು ಗೆಸ್ ಮಾಡುವ ಟಾಸ್ಕ್‌ ಮಾಡಿ ಯಶಸ್ವಿಯಾಗಿದ್ದು, ಇದರಿಂದ ಇವರಿಬ್ಬರ ಸ್ನೇಹ ಮತ್ತಷ್ಟು ಬಲವಂತಾಯಿತು. ಈ ಸ್ನೇಹಿತರು ಕಳೆದ ದಿನಗಳಲ್ಲಿ ‘ಖಡಕ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಮುಗಿಯದ ಟ್ವಿಸ್ಟ್‌ಗಳು ಇಂದೂ ಮುಂದುವರಿದಿವೆ. ವಿಶೇಷ ಅಧಿಕಾರ ಹೊಂದಿದ್ದ ಭವ್ಯಾ ಗೌಡ ಮತ್ತು ಯಮುನಾ ಅವರ ನಿರ್ಧಾರದಂತೆ, ಅನುಷಾ ರೈ "ನರಕ"ಕ್ಕೆ ಹೋಗಿದ್ದು, ಧರ್ಮ ಕೀರ್ತಿರಾಜ್ "ಸ್ವರ್ಗ"ಕ್ಕೆ ಕಾಲಿಟ್ಟಿದ್ದಾರೆ.