Back to Top

ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

SSTV Profile Logo SStv October 21, 2024
ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ
ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ
ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ ನಟ ಸುದೀಪ್ ಅವರ ತಾಯಿಯ ಅಂತಿಮ ದರ್ಶನ ಪಡೆಯಲು ಶಿವರಾಜ್‌ಕುಮಾರ್ ದಂಪತಿ, ನಟಿ ತಾರಾ ಡಾಲಿ ಧನಂಜಯ ಸೇರಿದಂತೆ ಅನೇಕರು ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸುದೀಪ್ ತಾಯಿಯ ಅಂತಿಮ ದರ್ಶನ ಪಡೆದ ಬಳಿಕ ದುಃಖದಲ್ಲಿರುವ ಸುದೀಪ್‌ರನ್ನು ಶಿವಣ್ಣ ಸಂತೈಸಿದ್ದಾರೆ. ಈ ವೇಳೆ, ಹಿರಿಯ ನಟಿ ತಾರಾ, ನಟ ಡಾಲಿ, ತರುಣ್ ಸುದೀರ್, ಅಭಿಮನ್ಯು ಕಾಶಿನಾಥ್, ಇಂದ್ರಜೀತ್ ಲಂಕೇಶ್, ರಕ್ಷಿತಾ ಪ್ರೇಮ್‌ ದಂಪತಿ ಸೇರಿದಂತೆ ಅನೇಕರು ನಟನ ಮನೆಗೆ ಆಗಮಿಸಿದ್ದಾರೆ. ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.