Back to Top

ಅಮ್ಮನಿಗೆ ಸುದೀಪ್ ಕೊಟ್ಟ ಮೊದಲ ಉಡುಗೊರೆ ಯಾವುದು ಗೊತ್ತಾ

SSTV Profile Logo SStv October 21, 2024
ಅಮ್ಮನಿಗೆ ಸುದೀಪ್ ಕೊಟ್ಟ ಮೊದಲ ಉಡುಗೊರೆ
ಅಮ್ಮನಿಗೆ ಸುದೀಪ್ ಕೊಟ್ಟ ಮೊದಲ ಉಡುಗೊರೆ
ಅಮ್ಮನಿಗೆ ಸುದೀಪ್ ಕೊಟ್ಟ ಮೊದಲ ಉಡುಗೊರೆ ಯಾವುದು ಗೊತ್ತಾ ಕನ್ನಡದ ಸ್ಟಾರ್ ನಟ ಸುದೀಪ್‌ಗೆ ಅಮ್ಮ ಸರೋಜಾ ಶಕ್ತಿಯಾಗಿದ್ದರು. ಸುದೀಪ್ ಮತ್ತು ಅಮ್ಮನ ನಡುವೆ ಬಾಂಧವ್ಯ ಹೇಗಿತ್ತು ಎಂಬುದನ್ನು ಈ ಹಿಂದೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ನಟ ಹಂಚಿಕೊಂಡಿದ್ದರು. ಅಮ್ಮನಿಗೆ ಮೊದಲ ಗಿಫ್ಟ್ ಕೊಟ್ಟಿದರ ವಿಚಾರವನ್ನು ಸುದೀಪ್ ಸ್ಮರಿಸಿದ್ದಾರೆ. ಕೆಲ ವರ್ಷಗಳ ಹಿಂದೆ ರಮೇಶ್ ಅರವಿಂದ್ ನಿರೂಪಣೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸುದೀಪ್ ಅತಿಥಿಯಾಗಿ ಭಾಗಿದ್ದರು. ಚಿತ್ರರಂಗದಲ್ಲಿ ಸುದೀಪ್‌ಗೆ ಐರೆನ್ ಲೆಗ್ ಎಂದು ಅನೇಕರು ಟೀಕಿಸಿದ್ದರು. ನಂತರ ದಿನಗಳಲ್ಲಿ ಅವರು ಸ್ಟಾರ್ ಬೆಳೆದಿದ್ದು ಹೇಗೆ? ಎಂದೆಲ್ಲಾ ಅನೇಕ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ರಿವೀಲ್ ಮಾಡಲಾಗಿತ್ತು. ಆಗ ತಾಯಿನ ಜೊತೆಗಿನ ಒಡನಾಟದ ಬಗ್ಗೆ ಕಿಚ್ಚ ಹೇಳಿಕೊಂಡಿದ್ದರು. ಆಗ ಅಮ್ಮನಿಗೆ ಕೊಟ್ಟ ಮೊದಲ ಉಡುಗೊರೆಯಾಗಿ ಸೀರೆ ಕೊಟ್ಟಿದ್ದೆ ಎಂದಿದ್ದಾರೆ ಸುದೀಪ್. ಶೋನಲ್ಲಿ ಅಮ್ಮನಿಗೆ ಕೊಟ್ಟ ಸೀರೆಯನ್ನು ತೋರಿಸಿದಾಗ ಸುದೀಪ್ ಖುಷಿಯಿಂದ ಸ್ಮೇಲ್ ಮಾಡುತ್ತಾರೆ. ಕೇಂಬ್ರಿಡ್ಜ್ ಸ್ಕೂಲ್‌ನಲ್ಲಿ 7ನೇ ತರಗತಿ ಓದುತ್ತಿದ್ದೆ, ಆಗ ನನ್ನನ್ನು ದೆಹಲಿಯಿಂದ ಆಗ್ರಾಗೆ ಕರೆದುಕೊಂಡು ಹೋಗಿದ್ದರು. ಆಗ ಅಲ್ಲಿಂದ ತೆಗೆದುಕೊಂಡು ಬಂದಿದ್ದೆ. ಪಾಕೆಟ್ ಮನಿ ಸೇವ್ ಮಾಡಿ ತಂದಿದ್ದೆ ಎಂದು ನಟ ಸ್ಮರಿಸಿದರು. ಮಗ ತಂದು ಕೊಟ್ಟ ಸೀರೆ ಎಂದು ಅವರ ತಾಯಿ ಕೂಡ ಅದನ್ನು ಜೋಪಾನ ಮಾಡಿದ್ದರು.