ನಮ್ಮಲ್ಲಿ ಕಾಸ್ಟಿಂಗ್ ಕೌಚ್ ಪದಕ್ಕೆ ಜಾಗವಿಲ್ಲ - ಐಶ್ವರ್ಯಾ ರಾಜೇಶ್
ತಮಿಳು ನಟಿ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಲೈಂಗಿಕ ಕಿರುಕುಳ ಮತ್ತು ಕಾಸ್ಟಿಂಗ್ ಕೌಚ್ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು. "ನಾನು ಚಿತ್ರರಂಗದಲ್ಲಿ ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ನನಗೆ ಯಾವುದೇ ಕಾಸ್ಟಿಂಗ್ ಕೌಚ್ ತೊಂದರೆ ಎದುರಾಗಿಲ್ಲ. ಕಾಲಿವುಡ್‌ನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿಲ್ಲ" ಎಂದು ಹೇಳಿದರು.
ಅಂದಹಾಗೆ, ಐಶ್ವರ್ಯಾ ರಾಜೇಶ್ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ನಟನೆಯ ‘ಉತ್ತರಾಕಾಂಡ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ.