Back to Top

ಫಸ್ಟ್‌ ಟೈಮ್‌ ತನ್ನ ಅಭಿಮಾನಿಗಳಿಗೆ ಸಂದೇಶ ರವಾನಿಸಿದ ದರ್ಶನ್

SSTV Profile Logo SStv October 10, 2024
ಅಭಿಮಾನಿಗಳಿಗೆ ಸಂದೇಶ ರವಾನಿಸಿದ ದರ್ಶನ್
ಅಭಿಮಾನಿಗಳಿಗೆ ಸಂದೇಶ ರವಾನಿಸಿದ ದರ್ಶನ್
ಫಸ್ಟ್‌ ಟೈಮ್‌ ತನ್ನ ಅಭಿಮಾನಿಗಳಿಗೆ ಸಂದೇಶ ರವಾನಿಸಿದ ದರ್ಶನ್ ಸ್ಯಾಂಡಲ್‌ವುಡ್ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಪಾಲಾಗಿದ್ದು, ಸದ್ಯ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ, ದರ್ಶನ್ ಅಭಿಮಾನಿಗಳಿಗೆ ಮೊದಲ ಬಾರಿಗೆ ಖಡಕ್ ಸಂದೇಶ ರವಾನಿಸಿದರು. ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದರೂ, ತಮ್ಮ ಅಭಿಮಾನಿಗಳಿಗೆ "ನೀವೆಲ್ಲಾ ನನ್ನ ಹೃದಯದಲ್ಲಿದ್ದೀರಾ" ಎಂಬ ಸನ್ನೆ ಮೂಲಕ ಪ್ರೀತಿಯ ಸಂದೇಶ ರವಾನಿಸಿದರು. ಕಪ್ಪು ಟೀ ಶರ್ಟ್ ಧರಿಸಿದ್ದ ದರ್ಶನ್, ಕೈಯಿಂದ ಎದೆ ಮುಟ್ಟಿಕೊಂಡು ಅಭಿಮಾನಿಗಳಿಗಾಗಿ ಈ ಇಶಾರಾ ಮಾಡಿದಾಗ, ನೆರೆದಿದ್ದ ಅಭಿಮಾನಿಗಳು ಉತ್ಸಾಹದಿಂದ ಜೈಕಾರ ಹಾಕಿದರು. ದರ್ಶನ್ 9 ವರ್ಷಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಬಳ್ಳಾರಿಗೆ ಶಿಫ್ಟ್ ಆದ ನಂತರ ಬೆನ್ನುನೋವು ಹೆಚ್ಚಾಗಿದ್ದು, ವೈದ್ಯರಿಂದ ಚಿಕಿತ್ಸೆ ಮುಂದುವರೆಯುತ್ತಿದೆ.