ಯಶ್ ನಟನೆಯ ‘ರಾಮಾಯಣ’ ಫಸ್ಟ್ ಲುಕ್ ರಿಲೀಸ್ ರಾವಣನಾಗಿ ಯಶ್


ಯಶ್ ನಟನೆಯ ‘ರಾಮಾಯಣ’ ಫಸ್ಟ್ ಲುಕ್ ರಿಲೀಸ್ ರಾವಣನಾಗಿ ಯಶ್ ನಟ ಯಶ್ ಅಭಿನಯಿಸುತ್ತಿರುವ ಬಹುಕೋಟಿ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಮಹತ್ವಾಕಾಂಕ್ಷೆಯ ಚಿತ್ರವು 2 ಭಾಗಗಳಲ್ಲಿ ಮೂಡಿ ಬರಲಿದ್ದು, ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಮತ್ತು ರಾವಣನಾಗಿ ಯಶ್‌ರ ಬೃಹತ್ ಪಾತ್ರ ಪ್ರೇಕ್ಷಕರಿಗೆ ಕಾತರತೆಯಾಯಕವಾಗಿದೆ.
ಚಿತ್ರದ ಮೊದಲ ಭಾಗವನ್ನು 2026ರ ದೀಪಾವಳಿಗೆ, ಮತ್ತು ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಯಶ್ ಸಹ ನಿರ್ಮಾಪಕರಾಗಿ ಸಹಭಾಗಿಯಾಗಿದ್ದಾರೆ. ಯಶ್ ಅವರ ರಾವಣನ ಪಾತ್ರದ ಬಗ್ಗೆ ಫ್ಯಾನ್ಸ್ ಆಕಾಂಕ್ಷೆಯನ್ನಿಟ್ಟಿದ್ದು, ಅವರ ತೀವ್ರ ನಟನೆಯನ್ನು ಈ ಚಿತ್ರದಲ್ಲಿ ನೋಡಲು ಕಾದಿದ್ದಾರೆ.