ಧನರಾಜ್ ಆಚಾರ್ ಮನೆಗೆ ಬಂದ ತಂಗಿ ಜಿಂಕೆ ಭವ್ಯಗೌಡ – ಫ್ಯಾಮಿಲಿ ಜೊತೆ ಖುಷಿಯ ಕ್ಷಣಗಳು ವೈರಲ್


ಬಿಗ್‌ಬಾಸ್ ಸೀಸನ್ 11 ಮೂಲಕ ಪ್ರೇಕ್ಷಕರಿಗೆ ಅಣ್ಣ-ತಂಗಿ ಜೋಡಿಯಾಗಿ ಮನರಂಜನೆ ನೀಡಿದ ಧನರಾಜ್ ಆಚಾರ್ ಮತ್ತು ಭವ್ಯಗೌಡ ಇಂದಿಗೂ ತಮ್ಮ ಸ್ನೇಹದ ಬಾಂಧವ್ಯವನ್ನು ಮುಂದುವರೆಸಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇವರ ಹರಟೆ, ಜಗಳ, ಮಮತೆ ಆಲ್-ಇನ್-ಒನ್ ಎಂಟರ್‌ಟೈನ್ಮೆಂಟ್ ನೀಡಿದ್ದು ಎಲ್ಲರ ಮನದಲ್ಲಿ ಇಂದಿಗೂ ತಾಜಾ ನೆನಪಾಗಿದೆ.
ಇತ್ತೀಚೆಗೆ ಭವ್ಯಗೌಡ ತಮ್ಮ ಬಿಗ್‌ಬಾಸ್ ಅಣ್ಣ ಧನರಾಜ್ ಆಚಾರ್‌ಗೆ ಸರ್‌ಪ್ರೈಸ್ ಕೊಡಲು ಮಂಗಳೂರಿಗೆ ಧಾವಿಸಿದರು. ಬೆಂಗಳೂರಿನಿಂದ ಏರ್‌ಪೋರ್ಟ್‌ಗೆ ಬಂದಿಳಿದ ಭವ್ಯಗೌಡರನ್ನು ಸ್ವಾಗತಿಸಿ ಧನು ಆಚಾರ್ ತಮ್ಮ ಮನೆಗೆ ಕರೆದುಕೊಂಡು ಹೋದರು. ಈ ಅಚ್ಚರಿ ಭೇಟಿ ಧನು ಆಚಾರ್‌ಗೇ ಅಲ್ಲ, ಅಭಿಮಾನಿಗಳಿಗೆ ಸಹ ದೊಡ್ಡ ಖುಷಿ ನೀಡಿತು.
ಧನರಾಜ್ ಅವರ ಮುದ್ದಿನ ಮಗಳು ಪ್ರಸಿದ್ಧಿಗೆ ಭವ್ಯಗೌಡ ಥೈಲ್ಯಾಂಡ್‌ನಿಂದ ತಂದಿದ್ದ ಕ್ಯೂಟ್ ಡ್ರೆಸ್ ತೊಡಿಸಿ ಪ್ರೀತಿಯಿಂದ ಮುದ್ದಾಡಿದರು. ಇದರಿಂದ ಧನು ಆಚಾರ್ ಕುಟುಂಬದಲ್ಲಿ ಸಂತೋಷದ ಸಂಭ್ರಮ ಹೆಚ್ಚಾಯಿತು. ಮಂಗಳೂರು ಅಂದ್ರೆ ಪ್ರಸಿದ್ಧವಾದ ಬಿಸಿ ಬಿಸಿ ಮಂಗಳೂರು ಬನ್! ಅದನ್ನೇ ಧನು ಆಚಾರ್ ತಮ್ಮ ತಂಗಿ ಜಿಂಕೆಗೆ ಸವಿಸಿದರು. ಮೆತ್ತಗಿನ, ರುಚಿಕರ ಬನ್ ತಿಂದ ಭವ್ಯಗೌಡ "ಮಂಗಳೂರು ಬನ್ ಹೀಗೆ ಉಂಟು" ಎಂದು ಮೆಚ್ಚಿಕೊಂಡರು.
ಹಸಿರು ಮಂಗಳೂರಿನ ಸವಾರಿ, ಮಾತ್ರವಲ್ಲ, ಭವ್ಯಗೌಡ ಧನು ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಿ, ಮಂಗಳೂರಿನ ಹಚ್ಚ ಹಸಿರು ಪರಿಸರದಲ್ಲಿ ಬೈಕ್ ಹಾಗೂ ಸ್ಕೂಟಿ ಓಡಿಸಿ ನಿಜಕ್ಕೂ ಮನಸಾರೆ ಖುಷಿ ಪಟ್ಟರು. ಈ ಮುದ್ದಾದ ಕ್ಷಣಗಳ ಫೋಟೋ ಮತ್ತು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು "ಬಿಗ್‌ಬಾಸ್ ಅಣ್ಣ-ತಂಗಿಯ ಬಾಂಡ್ ಇನ್ನೂ ಬಲವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯ ಎಂಟರ್‌ಟೈನ್ಮೆಂಟ್ ಈಗ ಮಂಗಳೂರಿನ ನೆಲೆಯಲ್ಲೂ ಮುಂದುವರಿದಂತಾಗಿದೆ!