ವಿನೋದ್ ಪ್ರಭಾಕರ್ ನಿರ್ಮಾಣದ “ಲಂಕಾಸುರ” – ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್ ಭರ್ಜರಿ ಪಾತ್ರಗಳಲ್ಲಿ


ಮಾದೇವ ಸಿನಿಮಾದ ಭರ್ಜರಿ ಸಕ್ಸಸ್ ನ ನಂತರ ನಟ ವಿನೋದ್ ಪ್ರಭಾಕರ್ ಅವರ ಮುಖ್ಯ ಭೂಮಿಕೆಯಲ್ಲಿ ನಟಿಸಿ ಮತ್ತು ಟೈಗರ್ ಟಾಕೀಸ್ ಸಂಸ್ಥೆ ಅಡಿಯಲ್ಲಿ ತಾವೇ ನಿರ್ಮಿಸಿರುವ ಲoಕಾಸುರ ಚಿತ್ರವು ಮೂಡಿ ಬರಲಿದೆ . ಶಿವನ ಭಕ್ತ ಮಾದೇವನಾಗಿ ಗೆದ್ದು ಈಗ ಮತ್ತೆ ಲಂಕೆಯ ಅಧಿಪತಿಯಾದ ಲಂಕಾಸುರನಾಗಿ ನಿಮ್ಮನ್ನು ರಂಜಿಸಲು ಬರ್ತಾ ಇದ್ದಾರೆ. ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್, ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ.
ಲಂಕಾಸುರ ಚಿತ್ರಕ್ಕೆ ವಿನೋದ್ ರವರ ಧರ್ಮಪತ್ನಿ ನಿಶಾ ವಿನೋದ್ ಪ್ರಭಾಕರ್ ರವರು ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಕುಮಾರ್ ಡಿ.ಎಸ್. ಆಕ್ಷನ್ ಕಟ್ ಹೇಳುತ್ತಿದ್ದು, ಛಾಯಾಗ್ರಾಹಕರಾಗಿ ಸುಗನ್, ಇನ್ನೂ ವಿಜೇತ್ ಕೃಷ್ಣ ಅವರ ಸಂಗೀತ ,ದೀಪು ಎಸ್ ಕುಮಾರ್ ಅವರ ಸಂಕಲನವಿದೆ.