ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಟೆಂಪಲ್ ರನ್


ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಟೆಂಪಲ್ ರನ್ ನಟ ದರ್ಶನ್‌ಗೆ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದ್ದಕ್ಕೆ ಸಂತೋಷಗೊಂಡ ಪತ್ನಿ ವಿಜಯಲಕ್ಷ್ಮಿ, ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದವರೊಂದಿಗೆ ದೇವಿಗೆ ಪ್ರಾರ್ಥನೆ ಸಲ್ಲಿಸಿದ ವಿಜಯಲಕ್ಷ್ಮಿ ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದು ಸಂತಸ ವ್ಯಕ್ತಪಡಿಸಿದರು. ದರ್ಶನ್ ಅಭಿಮಾನಿಗಳು ನೂರಾರು ತುಪ್ಪದ ದೀಪಗಳನ್ನು ಬೆಳಗಿಸಿ ದೇವಿಗೆ ಧನ್ಯತೆ ಸಲ್ಲಿಸಿದರು, ಈ ಮೂಲಕ ದರ್ಶನ್ ಅವರಿಗೆ ಜಾಮೀನು ಸಿಕ್ಕ ಬೆಳವಣಿಗೆಯನ್ನು ಅದ್ಧೂರಿಯಾಗಿ ಆಚರಿಸಿದರು.