ಅರೆಸ್ಟ್ ಆದ್ರೂ ಮೇಕ್‌ಅಪ್ ಮರೆಯದ ಪವಿತ್ರಾ ಗೌಡ! – ದರ್ಶನ್ ಗೆಳತಿಯ ಸ್ಟೈಲ್ ಮೇಲೆ ನೆಟ್ಟಿಗರ ಕಣ್ಣು


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ನಟ ದರ್ಶನ್ ಅವರ ಆಪ್ತ ಮಿತ್ರಳಾದ ಪವಿತ್ರಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅರೆಸ್ಟ್ ಸಮಯದಲ್ಲೂ ಮೇಕ್‌ಅಪ್ ಮರೆಯದ ಅವರ ಸ್ಟೈಲ್! ಆಗಸ್ಟ್ 14ರಂದು, ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಪವಿತ್ರಾ ಗೌಡ ಅವರ ಮನೆಗೆ ಪೊಲೀಸರು ಅರೆಸ್ಟ್ ಮಾಡಲು ಬಂದ್ರು. ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ 7 ಮಂದಿಯ ಜಾಮೀನು ರದ್ದುಪಡಿಸಿದ್ದರಿಂದಲೇ ಈ ಕ್ರಮ. ಆದರೆ, ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆಯುವಾಗ ಒಂದು ಸಂಗತಿ ಎಲ್ಲರ ಗಮನ ಸೆಳೆದಿತು ಅವರ ಮೇಕ್‌ಅಪ್ ಮತ್ತು ಡ್ರೆಸ್-ಅಪ್!
ಪವಿತ್ರಾ ಗೌಡ ಆರೆಂಜ್ ಬಣ್ಣದ ಡ್ರೆಸ್ ಧರಿಸಿದ್ದರು. ಮುಖದಲ್ಲಿ ಪಕ್ಕಾ ಮೇಕ್‌ಅಪ್, ಲಿಪ್‌ಸ್ಟಿಕ್, ಹೇರ್ ಕೋಂಬಿಂಗ್ ಎಲ್ಲವೂ ಫಂಕ್ಷನ್‌ಗೆ ಸಿದ್ಧರಾದಂತಿತ್ತು. ಪೊಲೀಸರು ನೇರವಾಗಿ ಬಂಧಿಸಲು ಬಂದರೂ, ಅವರು ತಕ್ಷಣ ಹೊರಬರದೇ, ಸಮಯ ತೆಗೆದುಕೊಂಡಿದ್ದರು. ಈ ಮಧ್ಯೆ ಅವರ ಲುಕ್ ಮಾಧ್ಯಮದ ಕ್ಯಾಮರಾಗಳಲ್ಲಿ ಸ್ಪಷ್ಟವಾಗಿ ಸೆರೆ ಸಿಕ್ಕಿತು.
ಮಾಧ್ಯಮ ಪ್ರತಿನಿಧಿಗಳು ಹಾಗೂ ಸೋಷಿಯಲ್ ಮೀಡಿಯಾ ಬಳಕೆದಾರರು ಪವಿತ್ರಾ ಗೌಡ ಅವರ ಮೇಕ್‌ಅಪ್ ಕ್ರೇಜ್ ಬಗ್ಗೆ ಮತ್ತೆ ಚರ್ಚೆ ಶುರುಮಾಡಿದರು. “ಜೈಲಿಗೆ ಹೋಗ್ತಿದ್ದರೂ ಸ್ಟೈಲ್ ಮಿಸ್ ಮಾಡೋದಿಲ್ಲ!” ಎಂಬ ಟಿಪ್ಪಣಿಗಳು ಹರಿದಾಡಿದವು. ಈ ಹಿಂದೆ ಕೂಡ ಪವಿತ್ರಾ ಗೌಡ ಬಂಧಿತರಾದಾಗ, ಮೇಕ್‌ಅಪ್ ವಿಚಾರದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಮೇಕ್‌ಅಪ್ ಬೇಕು ಎಂದು ಕೇಳಿದ್ದಾರಂತೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು.
ಬಂಧನದ ಕ್ಷಣದಲ್ಲಿ ಪವಿತ್ರಾ ಗೌಡ ಕಣ್ಣೀರು ಹಾಕಿದರೂ, ಅವರ ಡ್ರೆಸ್-ಅಪ್ ಮತ್ತು ಮೇಕ್‌ಅಪ್ ಚರ್ಚೆಗೆ ಕಾರಣವಾಯಿತು. ಮಗಳು ತಬ್ಬಿಕೊಂಡು ಅಳುತ್ತಿದ್ದ ದೃಶ್ಯವೂ ಮನಕಲಕಿತು. ಆದರೆ, ಈ ಎಲ್ಲಾ ಭಾವನಾತ್ಮಕ ಕ್ಷಣಗಳ ನಡುವೆ, “ಮೇಕ್‌ಅಪ್ ಪವಿತ್ರಾ” ಎಂಬ ಹೆಸರು ಮತ್ತೊಮ್ಮೆ ನೆಟ್ಟಿಗರ ಬಾಯಲ್ಲಿ ಸುತ್ತಾಡುತ್ತಿದೆ.