ತ್ರಿವಿಕ್ರಮ್ ವಿರುದ್ಧ ಕೆರಳಿದ ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಮಾತಿನ ಜಗಳ


ತ್ರಿವಿಕ್ರಮ್ ವಿರುದ್ಧ ಕೆರಳಿದ ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಮಾತಿನ ಜಗಳ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ನಟಿ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಡುವೆ ಮಾತಿನ ಚಕಮಕಿ ತೀವ್ರವಾಗಿದೆ. ತ್ರಿವಿಕ್ರಮ್ ಅವರ ತಕ್ಷನ ಉಕ್ತಿಗೆ ಕೆರಳಿದ ಮೋಕ್ಷಿತಾ, “ಗೋಮುಖ ವ್ಯಾಘ್ರ” ಎಂದು ಕರೆದಿದ್ದು, “ನಾನು 10 ವಾರ ಇರುತ್ತೇನೆ ಅಂತ ನಿರ್ಧಾರ ಮಾಡೋಕೆ ನೀವು ಯಾರು?” ಎಂದು ಪ್ರಶ್ನಿಸಿದ್ದಾರೆ.
ತ್ರಿವಿಕ್ರಮ್, “ನೀನು ಫಿನಾಲೆಗೆ ಹೋಗಮ್ಮಾ” ಎಂದು ತಿರುಗೇಟು ನೀಡಿದರೂ, ಮೋಕ್ಷಿತಾ ಸುಮ್ಮನಾಗದೆ, ತ್ರಿವಿಕ್ರಮ್‌ನ್ನು ‘ಗೋಮುಖ ವ್ಯಾಘ್ರ’ ಎಂದು ಕಡಕಾಗಿ ಪ್ರತಿಯಾಗಿ, “ನೀವು ಆಟ ಆಡ್ತಿದ್ದೀರಿ, ಇವತ್ತಿಂದ ನನ್ನ ಆಟ ಶುರು” ಎಂದು ಸವಾಲು ಹಾಕಿದ್ದಾರೆ.
ಸಾಧಾರಣವಾಗಿ ಶಾಂತವಾಗಿರುವ ಮೋಕ್ಷಿತಾ ಈ ಬಾರಿಯ ವಾಗ್ವಾದದಲ್ಲಿ ತೀವ್ರ ತೇಜಸ್ ಕಂಡಿದ್ದು, ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರು ಮತ್ತು ಸ್ಪರ್ಧಿಗಳನ್ನು ದಂಗಾಗಿಸಿದೆ.