ದರ್ಶನ್ ಬೆನ್ನಿನ ನೋವಿನ ಹಿನ್ನಲೆ ತರುಣ್ ಸುಧೀರ್ ಅಭಿಪ್ರಾಯ


ದರ್ಶನ್ ಬೆನ್ನಿನ ನೋವಿನ ಹಿನ್ನಲೆ ತರುಣ್ ಸುಧೀರ್ ಅಭಿಪ್ರಾಯ ನೂರಕ್ಕೂ ಹೆಚ್ಚು ದಿನಗಳ ಜೈಲಿನಿಂದ ಬಿಡುಗಡೆಯಾದ ದರ್ಶನ್ ಅವರ ಆರೋಗ್ಯದ ಬಗ್ಗೆ ತರುಣ್ ಸುಧೀರ್ ಆತಂಕ ವ್ಯಕ್ತಪಡಿಸಿದ್ದಾರೆ. "ಕಾಟೇರ ಚಿತ್ರೀಕರಣದ ಸಮಯದಲ್ಲಿಯೇ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಅವರೇ ಹೇಳಿದ್ದು, ‘ನೋವು ಕಾಲಿನವರೆಗೆ ಹರಡುತ್ತಿದೆ’ ಎಂದು," ತಿಳಿಸಿದ್ದಾರೆ. ಚಿತ್ರೀಕರಣ ತೊಂದರೆಯಾಗಬಾರದೆಂದು ದರ್ಶನ್ ನೋವು ತಾಳಿಕೊಂಡು ಕೆಲಸ ಮಾಡಿದ್ದು, ಅದೇ ನೋವು ಜೈಲಿನಲ್ಲೂ ಉಂಟಾಗಿದೆ.
ದರ್ಶನ್ ಆರು ವಾರಗಳ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿರುವುದು, ಚಿತ್ರರಂಗಕ್ಕೂ ಅಭಿಮಾನಿಗಳಿಗೂ ಸಿಹಿ ಸುದ್ದಿ. ತರುಣ್ ಸುಧೀರ್, ದರ್ಶನ್‌ನ ಈ ತ್ಯಾಗದ ಮನೋಭಾವನೆಗೆ ಪ್ರಶಂಸೆಯ ಮಾತುಗಳನ್ನೂ ತಿಳಿಸಿದ್ದಾರೆ.